Home ಟಾಪ್ ಸುದ್ದಿಗಳು ಡಿಜಿಪಿಗೆ ಬಡ್ತಿ ಬಳಿಕವೂ ಒಂದು ವರ್ಷ ಕಮೀಷನರ್ ಹುದ್ದೆ ಅವಕಾಶ ನೀಡಿದ ಸರ್ಕಾರಕ್ಕೆ ಋಣಿ:...

ಡಿಜಿಪಿಗೆ ಬಡ್ತಿ ಬಳಿಕವೂ ಒಂದು ವರ್ಷ ಕಮೀಷನರ್ ಹುದ್ದೆ ಅವಕಾಶ ನೀಡಿದ ಸರ್ಕಾರಕ್ಕೆ ಋಣಿ: ಕಮಲ್ ಪಂತ್

ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ


ಬೆಂಗಳೂರು: ಡಿಜಿಪಿ ಹುದ್ದೆಗೆ ಬಡ್ತಿ ದೊರೆತ ಬಳಿಕವೂ ಒಂದು ವರ್ಷಕಾಲ ಪೊಲೀಸ್ ಆಯುಕ್ತರ ಹುದ್ದೆಯಲ್ಲಿ ಮುಂದುವರೆಯಲು ಅವಕಾಶ ನೀಡಿದ ರಾಜ್ಯ ಸರ್ಕಾರಕ್ಕೆ ಋಣಿಯಾಗಿದ್ದೇನೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಜೊತೆ ಕೆಲಸ ಮಾಡಿದ ಪ್ರತಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಅವರ ಸಹಕಾರದಿಂದಲೇ ನಾನು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದರು.
ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಕುರಿತು ಮಾತನಾಡಿದ ಕಮಲ್ ಪಂತ್, ನಾನು ಈವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ಮುಂದಿನ ದಿನಗಳಲ್ಲಿ ನೇಮಕಾತಿ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ಭರವಸೆಯಿದೆ. ರೌಡಿ ಚಟುವಟಿಕೆ, ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಬಂದಿದೆ. ಸೈಬರ್ ಕ್ರೈಂ ತಡೆಗೆ ಸಿಐಆರ್ ಮಾದರಿ ಜಾರಿಗೆ ತಂದಿದ್ದೇವೆ. ಸಿಐಆರ್ ಮಾದರಿಯನ್ನು ದೇಶಾದ್ಯಂತ ಅನುಸರಿಸುತ್ತಿದ್ದಾರೆ. ಕೊವಿಡ್ ವೇಳೆ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.
ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಬಿಟ್ ಕಾಯಿನ್ ಕೇಸ್ ನ ಕುರಿತು ಯಾವುದೇ ಗೊಂದಲವಿರಲಿಲ್ಲ. ಜೆಜೆ ನಗರದ ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ. ನಾನು ಸಂಪೂರ್ಣ ತೃಪ್ತಿಯಿಂದ ವರ್ಗಾವಣೆಯಾಗುತ್ತಿದ್ದೇನೆ. ಇದು ನನ್ನ ಜೀವನದ ಗರಿಷ್ಠ ತೃಪ್ತಿ ಎಂದೇ ಹೇಳಬಹುದು. ಚಂದ್ರು ಕೊಲೆ ಪ್ರಕರಣದಲ್ಲೂ ಯಾವುದೇ ಗೊಂದಲ ಇರಲಿಲ್ಲ ಎಂದು ಗೃಹ ಸಚಿವರಿಗೆ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ. ಸಿ.ಎಚ್.ಪ್ರತಾಪ್ ರೆಡ್ಡಿ ದಕ್ಷ ಹಾಗೂ ಸಮರ್ಥ ಅಧಿಕಾರಿ ಎಂದರು.

Join Whatsapp
Exit mobile version