Home ಟಾಪ್ ಸುದ್ದಿಗಳು ಫೆಲೆಸ್ತೀನ್ ಭೂಮಿಯ ಮೇಲೆ ಇಸ್ರೇಲ್ ಆಕ್ರಮಣ ಕಾನೂನುಬಾಹಿರ: ವಿಶ್ವಸಂಸ್ಥೆ ತನಿಖಾ ಆಯೋಗ

ಫೆಲೆಸ್ತೀನ್ ಭೂಮಿಯ ಮೇಲೆ ಇಸ್ರೇಲ್ ಆಕ್ರಮಣ ಕಾನೂನುಬಾಹಿರ: ವಿಶ್ವಸಂಸ್ಥೆ ತನಿಖಾ ಆಯೋಗ

ಜಿನೇವಾ: ಫೆಲೆಸ್ತೀನ್ ಭೂ ಪ್ರದೇಶವನ್ನು ಇಸ್ರೇಲ್ ಸರ್ಕಾರ ಆಕ್ರಮಿಸಿಕೊಂಡಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ನೇಮಿಸಿದ ತನಿಖಾ ಆಯೋಗವು ತನ್ನ ಮೊದಲ ವರದಿಯಲ್ಲಿ ತಿಳಿಸಿದೆ.

ಮೂವರು ಸದಸ್ಯರ ಆಯೋಗವು ಈ ಸಮಸ್ಯೆಯನ್ನು ವಿಶ್ವಸಂಸ್ಥೆಯ ಅತ್ಯುನ್ನತ ನ್ಯಾಯಾಲಯವಾದ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲು ಶಿಫಾರಸು ಮಾಡಿದೆ.

ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಯುದ್ಧದ ಸಂದರ್ಭದಲ್ಲಿ ಭೂಪ್ರದೇಶವನ್ನು ವಶಪಡಿಸಿಕೊಳ್ಳುವುದು ಕ್ಷಣಿಕ ಪ್ರಕ್ರಿಯೆ ಮತ್ತು ಸಾರ್ವಭೌಮತ್ವದ ಅಧಿಕಾರವನ್ನು ಆಕ್ರಮಿತ ಯಾವುದೇ ರಾಷ್ಟ್ರ ಕಸಿದುಕೊಳ್ಳುವುದಿಲ್ಲ ಎಂದು ವಿಶ್ವಸಂಸ್ಥೆಯ ತನಿಖಾ ಆಯೋಗ ಒತ್ತಿ ಹೇಳಿದೆ.

ವಿಶ್ವಸಂಸ್ಥೆಯ ಸೆಕ್ರೆಟರ್ ಜನರಲ್ ಮತ್ತು ಹಲವಾರು ಸದಸ್ಯ ರಾಷ್ಟ್ರಗಳ ಇತ್ತೀಚಿನ ಹೇಳಿಕೆಗಳು ಒಂದು ರಾಷ್ಟ್ರದ ಭೂಪ್ರದೇಶವನ್ನು ಮತ್ತೊಂದು ರಾಷ್ಟ್ರವು ಏಕಪಕ್ಷೀಯವಾಗಿ ಸ್ವಾಧೀನಪಡಿಸಿಕೊಳ್ಳುವ ಯಾವುದೇ ಪ್ರಯತ್ನವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟವಾಗಿ ಸೂಚಿಸಿದೆ. ಕಳೆದ ವಾರ ಇಸ್ರೇಲ್ ಸೇರಿದಂತೆ 143 ಸದಸ್ಯ ರಾಷ್ಟ್ರಗಳು ಇದನ್ನು ಪುನರುಚ್ಚರಿಸುವ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಮತ ಚಲಾಯಿಸಿವೆ ಎಂದು ಆಯೋಗದ ಅಧ್ಯಕ್ಷ ನವಿ ಪಿಳ್ಳೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಭೂಮಿಯ ಮೇಲೆ ಶಾಶ್ವತ ನಿಯಂತ್ರಣವನ್ನು ಕಾಯ್ದುಕೊಳ್ಳುವ ಉದ್ದೇಶವನ್ನು ಸೂಚಿಸುವ ಇಸ್ರೇಲಿ ಅಧಿಕಾರಿಗಳು ಮಾಡಿದ ಹೇಳಿಕೆಗಳನ್ನು ಒಳಗೊಂಡಂತೆ ಇಸ್ರೇಲ್ ತನ್ನ ವಸಾಹತು ಉದ್ಯಮವನ್ನು ಹೇಗೆ ಉಳಿಸಿಕೊಂಡಿದೆ ಮತ್ತು ಮುಂದುವರಿಸಿದೆ ಎಂಬುವುದರ ಮೇಲೆ ಅವರ ಗಮನಹರಿಸಿದ್ದಾರೆ.

ಬಲ ಪ್ರಯೋಗಿಸಿ ಅನ್ಯ ರಾಷ್ಟ್ರದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರಿಸುವ ಮೂಲಕ ಇಸ್ರೇಲ್, ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಫೆಲೆಸ್ತೀನ್ ಹಕ್ಕುಗಳ ಉಲ್ಲಂಘನೆಗಳಿಗೆ ಎಲ್ಲರಂತೆ ಇಸ್ರೇಲ್ ವೈಯಕ್ತಿಕವಾಗಿ ಕೂಡ ಜವಾಬ್ದಾರನಾಗಿರುತ್ತದೆ ಎಂದು ಆಯೋಗವು ಅಭಿಪ್ರಾಯ ವ್ಯಕ್ತಪಡಿಸಿದೆ.

“ವಸಾಹತುಗಳನ್ನು ಸ್ಥಾಪಿಸುವಲ್ಲಿ ಅಥವಾ ಸುಗಮಗೊಳಿಸುವಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ನಿರ್ಲಕ್ಷಿಸುವ ಮೂಲಕ ಮತ್ತು ನೇರವಾಗಿ ಅಥವಾ ಪರೋಕ್ಷವಾಗಿ ಇಸ್ರೇಲಿ ನಾಗರಿಕರನ್ನು ಈ ವಸಾಹತುಗಳಿಗೆ ವರ್ಗಾಯಿಸುವ ಮೂಲಕ ಸತತ ಇಸ್ರೇಲ್ ಸರ್ಕಾರ ಪಶ್ಚಿಮ ದಂಡೆಯಲ್ಲಿ ಶಾಶ್ವತ ಇಸ್ರೇಲಿ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಶ್ರೀಮತಿ ಪಿಳ್ಳೆ ಅವರು ಉಲ್ಲೇಖಿಸಿದ್ದಾರೆ.

ಅವರು ತಮ್ಮ ವರದಿಯನ್ನು ಅಕ್ಟೋಬರ್ 27 ರಂದು ಯುಎನ್ ಜನರಲ್ ಅಸೆಂಬ್ಲಿಗೆ ಮಂಡಿಸಲಿದ್ದಾರೆ.

Join Whatsapp
Exit mobile version