ನಾನು ಚಾಮುಂಡೇಶ್ವರಿಯಿಂದ ಸ್ಪರ್ಧಿಸುತ್ತೇನೆ, ನನ್ನ ಮಗನಿಗೆ ಹುಣಸೂರು ಕ್ಷೇತ್ರ ಸೂಚಿಸಿದ್ದಾರೆ: ಜಿಟಿಡಿ ಘೋಷಣೆ

Prasthutha|

ಮೈಸೂರು: ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಪ್ರಕಟಗೊಂಡಿದೆ. ‘ನಾನು ಚಾಮುಂಡೇಶ್ವರಿಯಲ್ಲಿ, ಮಗ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಹುಣಸೂರಿನಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.

- Advertisement -


ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡ ಅವರೊಂದಿಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಚಾಮುಂಡೇಶ್ವರಿಯಲ್ಲಿ, ಮಗ, ಜಿ.ಡಿ. ಹರೀಶ್ ಗೌಡ ಹುಣಸೂರಿನಲ್ಲಿ ಸ್ಪರ್ಧಿಸಲಿದ್ದೇವೆ. ಕೆ.ಆರ್ ನಗರಕ್ಕೆ ಸಾ.ರಾ ಮಹೇಶ್, ಪಿರಿಯಾಪಟ್ಟಣಕ್ಕೆ ಕೆ. ಮಹದೇವ್, ತಿ. ನರಸೀಪುರಕ್ಕೆ ಅಶ್ವಿನ್ ಕುಮಾರ್, ಎಚ್.ಡಿ. ಕೋಟೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್ ಗೆ ಟಿಕೆಟ್ ಬಹುತೇಕ ಅಂತಿಮವಾಗಿದೆ’ ಎಂದು ಮಾಹಿತಿ ನೀಡಿದರು. ನಾನು, ದೇವೇಗೌಡರ ಮನೆಗೆ ಬಂದ ದಿನ ಗುರುವಾರದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. 3 ವರ್ಷಗಳ ನಂತರ ಮನಸ್ಸು ಸಮಾಧಾನದಲ್ಲಿದೆ. ನಾನು ಮತ್ತು ಕುಟುಂಬದವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನು ಯಾವ ಗೊಂದಲಗಳೂ ಉಳಿದಿಲ್ಲ’ ಎಂದು ತಿಳಿಸಿದರು.

Join Whatsapp
Exit mobile version