ಗಾಝಾದ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ; ವೈದ್ಯ ಮೃತ್ಯು, 9 ಜನರಿಗೆ ಗಾಯ

- Advertisement -

ದೀರ್ ಅಲ್-ಬಲಾಹ್: ಗಾಝಾದ ಫೀಲ್ಡ್ ಆಸ್ಪತ್ರೆಯ ಉತ್ತರ ದ್ವಾರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಒಬ್ಬ ವೈದ್ಯರು ಮೃತಪಟ್ಟಿದ್ದು, ಒಂಬತ್ತು ಜನ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

- Advertisement -

ಮುವಾಸಿ ಪ್ರದೇಶದ ಕುವೈತ್ ಫೀಲ್ಡ್ ಆಸ್ಪತ್ರೆಯ ಮೇಲೆ ಈ ದಾಳಿ ನಡೆದಿದ್ದು, ಲಕ್ಷಾಂತರ ಜನರು ವಿಶಾಲವಾದ ಟೆಂಟ್ ನಲ್ಲಿ ಆಶ್ರಯ ಪಡೆದಿದ್ದಾರೆ.

ಗಾಯಾಳುಗಳೆಲ್ಲರೂ ರೋಗಿಗಳು ಮತ್ತು ವೈದ್ಯರಾಗಿದ್ದು, ಇಬ್ಬರು ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವಕ್ತಾರ ಸಬರ್ ಮೊಹಮ್ಮದ್ ಹೇಳಿದ್ದಾರೆ.

- Advertisement -


Must Read

Related Articles