Home ಟಾಪ್ ಸುದ್ದಿಗಳು ವಸಾಹತುಶಾಹಿ ಕಾಲನಿ ನಿರ್ಮಾಣಕ್ಕೆ ಇಸ್ರೇಲ್ ಸರ್ಕಾರ ಅನುಮೋದನೆ| ಫೆಲೆಸ್ತೀನಿಯನ್ನರ ಆಕ್ರೋಶ

ವಸಾಹತುಶಾಹಿ ಕಾಲನಿ ನಿರ್ಮಾಣಕ್ಕೆ ಇಸ್ರೇಲ್ ಸರ್ಕಾರ ಅನುಮೋದನೆ| ಫೆಲೆಸ್ತೀನಿಯನ್ನರ ಆಕ್ರೋಶ

ಜೆರುಸಲೇಮ್: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸುಮಾರು 13 ಸಾವಿರ ನೂತನ ವಸತಿ ನಿರ್ಮಾಣದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಸರ್ಕಾರದ ನಡೆಗೆ ಫೆಲೆಸ್ತೀನ್ ಜನತೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ವೆಸ್ಟ್ ಬ್ಯಾಂಕ್ ನಲ್ಲಿ 1335 ವಸತಿ ಘಟಕಗಳಿಗೆ ನಿರ್ಮಾಣ ಟೆಂಡರ್ ಗಳನ್ನು ಘೋಷಿಸಿದೆ. ಈ ಮಧ್ಯೆ ವಾರದ ನಂತರ ವೆಸ್ಟ್ ಬ್ಯಾಂಕ್ ನಲ್ಲಿ ಸುಮಾರು 3000 ಹೆಚ್ಚುವರಿ ವಸಾಹತು ನಿವಾಸಗಳನ್ನು ಅಧಿಕೃತಗೊಳಿಸುವ ಸಾಧ್ಯತೆಯಿದೆ.

ಬಲಪಂಥೀಯ ನ್ಯೂ ಹೋಪ್ ಪಕ್ಷದ ಇಸ್ರೇಲ್ ನ ವಸತಿ ಮತ್ತು ನಗರಾಭಿವೃದ್ದಿ ಸಚಿವ ಝೀವ್ ಎಲ್ಕಿನ್ ಅವರು ಭಾನುವಾರ ಸರ್ಕಾರ ಪ್ರಕಟಿಸಿದ ಟೆಂಡರ್ ಪ್ರಕ್ರಿಯೆಯನ್ನು ಸ್ವಾಗತಿಸಿದ್ದಾರೆ.

ಯುರೋಪಿಯನ್ ಯೂನಿಯನ್ ವಸಾಹತು ನಿರ್ಮಾಣವನ್ನು ನಿಲ್ಲಿಸುವಂತೆ ಮತ್ತು ಘೋಷಿತ ಟೆಂಡರ್‌ಗಳನ್ನು ಮುಂದುವರಿಸದಂತೆ ಇಸ್ರೇಲ್‌ಗೆ ಕರೆ ನೀಡಿದೆ.

Join Whatsapp
Exit mobile version