ಡೀರ್ ಅಲ್ ಬಲಾಹ್: ಗಾಝಾಪಟ್ಟಿಯ ವಿವಿಧೆಡೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕಳೆದ 24 ಗಂಟೆಯಲ್ಲಿ 57 ಮಂದಿ ಮೃತಪಟ್ಟಿದ್ದಾರೆ. 137 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ.
- Advertisement -
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಅಮೆರಿಕಕ್ಕೆ ತೆರಳಿರುವಾಗಲೇ ಈ ದಾಳಿ ನಡೆದಿದೆ.
ಜಬಾಲಿಯದಲ್ಲಿನ ನಿರಾಶ್ರಿತರ ಶಿಬಿರ, ಖಾನ್ ಯೂನಸ್ ನಲ್ಲಿನ ಮನೆ, ಗಾಝಾ ನಗರದ ಬೇಕರಿ ಬಳಿ ಸ್ಫೋಟ ಸಂಭವಿಸಿವೆ. ಪತ್ರಕರ್ತೆ, ಶಿಶು ಮೃತಪಟ್ಟವರಲ್ಲಿ ಸೇರಿದ್ದಾರೆ.