Home ಟಾಪ್ ಸುದ್ದಿಗಳು ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣ: ಇರಾನ್‌ನ ಉನ್ನತ ಸೇನಾಧಿಕಾರಿಗಳು ಸಹಿತ 20ಕ್ಕೂ ಅಧಿಕ ಜನರ ಬಂಧನ

ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣ: ಇರಾನ್‌ನ ಉನ್ನತ ಸೇನಾಧಿಕಾರಿಗಳು ಸಹಿತ 20ಕ್ಕೂ ಅಧಿಕ ಜನರ ಬಂಧನ

ಟೆಹ್ರಾನ್: ಟೆಹ್ರಾನ್‍ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹಾನಿಯೆಹ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇರಾನ್‌ನ ಉನ್ನತ ಸೇನಾಧಿಕಾರಿಗಳು, ಗುಪ್ತಚರ ಅಧಿಕಾರಿಗಳ ಸಹಿತ 20ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಇರಾನ್‍ನ ಭದ್ರತಾ ಪಡೆಗಳು ಹಾನಿಯೆಹ್ ತಂಗಿದ್ದ ಅತಿಥಿ ಗೃಹವನ್ನು ಶೋಧಿಸಿದ್ದು, ಸಿಬ್ಬಂದಿಯನ್ನು ಬಂಧಿಸಿ ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಅತಿಥಿ ಗೃಹದಲ್ಲಿರುವ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.

ರಾಜಧಾನಿ ಟೆಹ್ರಾನ್‍ನ ಭದ್ರತೆಯ ಹೊಣೆ ವಹಿಸಿರುವ ಹಿರಿಯ ಸೇನಾಧಿಕಾರಿಗಳು, ಉನ್ನತ ಗುಪ್ತಚರ ಅಧಿಕಾರಿಗಳನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.

ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್ ಇರಾನ್‍ನ ಭದ್ರತಾ ಏಜೆಂಟರನ್ನು ಹಾನಿಯೆಹ್ ಹತ್ಯೆಗೆ ಬಳಸಿಕೊಂಡಿದೆ. ಮೊಸಾದ್‍ನ ಪರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಏಜೆಂಟರು ಹಾನಿಯೆಹ್ ತಂಗಿದ್ದ ಮನೆಯ 3 ಪ್ರತ್ಯೇಕ ಕೋಣೆಗಳಲ್ಲಿ ಸ್ಫೋಟಕ ಇರಿಸಿದ್ದರು ಎಂದು ವರದಿಯಾಗಿದೆ.

ಇರಾನ್ ಆಡಳಿತ ತನ್ನ ತಾಯ್ನಾಡನ್ನು ಅಥವಾ ಮಿತ್ರರನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯು ಇರಾನ್ ಆಡಳಿತಕ್ಕೆ ಮಾರಕವಾಗಬಹುದು ಎಂದು ಇರಾನ್ ಭಾವಿಸಿದೆ ಎಂದು ವರದಿ ಹೇಳಿದೆ.

Join Whatsapp
Exit mobile version