Home ಟಾಪ್ ಸುದ್ದಿಗಳು ವಿದ್ಯಾರ್ಥಿಗಳೇನು ಟೆರರಿಸ್ಟಾ: ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ಘೋಷಣೆಗೆ ಡಿಕೆಶಿ ಕಿಡಿ

ವಿದ್ಯಾರ್ಥಿಗಳೇನು ಟೆರರಿಸ್ಟಾ: ಮೋದಿ ಭೇಟಿ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ರಜೆ ಘೋಷಣೆಗೆ ಡಿಕೆಶಿ ಕಿಡಿ

ಬೆಂಗಳೂರು: ನಾಳೆಯಿಂದ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮೈಸೂರಿಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಸಂಚರಿಸುವ ರಸ್ತೆಯಲ್ಲಿರುವ ಕಾಲೇಜುಗಳೆಗೆ ರಜೆ ಘೋಷಿಸಲಾಗಿದ್ದು ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು, ವಿದ್ಯಾರ್ಥಿಗಳು ಏನು ಗಲಾಟೆ ಮಾಡುತ್ತಾರ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.


ಸಂಚರಿಸುವ ವೇಳೆ ಭದ್ರತೆಯನ್ನು ಕೊಡಿ, ರೋಡ್ ಶೋ ಮಾಡಲಿ, ರಾಜಕೀಯವನ್ನೂ ಮಾಡಿ. ಆದರೆ ವಿದ್ಯಾರ್ಥಿಗಳನ್ನು ಏಕೆ ಅನುಮಾನದಿಂದ ನೋಡುತ್ತೀರಾ? ಅವರೇನು ಟೆರರಿಸ್ಟಾ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version