Home ಟಾಪ್ ಸುದ್ದಿಗಳು ಡೊನಾಲ್ಡ್ ಟ್ರಂಪ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಇರಾಕ್ ಸುಪ್ರೀಂ ಕೋರ್ಟ್

ಡೊನಾಲ್ಡ್ ಟ್ರಂಪ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಇರಾಕ್ ಸುಪ್ರೀಂ ಕೋರ್ಟ್

ಬಾಗ್ದಾದ್: ಇರಾಕ್ನ ಪ್ರಭಾವಿ ಸೇನಾ ನಾಯಕ ಹಾಗೂ ಜನರಲ್ ಒಬ್ಬರ ಹತ್ಯೆಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾಕ್ ನ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ.


ಜನರಲ್ ಕಾಸಿಂ ಸುಲೈಮಾನಿ ಹಾಗೂ ಅಬು ಮಹ್ದಿ ಅಲ್–ಮುಹಂದೀಸ್ ಹತ್ಯೆಗೆ ಅಂದಿನ ಅಮೆರಿಕ ಸರ್ಕಾರ ಆದೇಶಿಸಿದ ಡ್ರೋನ್ ದಾಳಿಯು ಕಾರಣವಾಗಿತ್ತು. 2020ರ ಜನವರಿಯಲ್ಲಿ ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಈ ದಾಳಿ ನಡೆದಿತ್ತು.

ಅಬು ಮಹ್ದಿ, ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ವಿರುದ್ಧ ಹೋರಾಡಲು ರಚಿಸಿದ್ದ ಪಡೆಯ ಉಪನಾಯಕರಾಗಿದ್ದರು. ಸುಲೈಮಾನಿ, ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಮುಖ್ಯಸ್ಥರಾಗಿದ್ದರು. ಪೂರ್ವಾಲೋಚಿತ ಕೊಲೆ ಆರೋಪದ ಮೇಲೆ ಬಂಧನ ವಾರಂಟ್ ಹೊರಡಿಸಲಾಗಿದ್ದು, ಅಪರಾಧ ಸಾಬೀತಾದರೆ ಮರಣದಂಡನೆ ಶಿಕ್ಷೆಯಾಗಲಿದೆ.

Join Whatsapp
Exit mobile version