Home ಟಾಪ್ ಸುದ್ದಿಗಳು ಇಸ್ರೇಲ್ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಇರಾನ್ ರಕ್ಷಣಾ ಪಡೆ

ಇಸ್ರೇಲ್ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಇರಾನ್ ರಕ್ಷಣಾ ಪಡೆ

ಇರಾನ್: ಇಸ್ರೇಲ್ ದಾಳಿಯನ್ನು ಇರಾನ್’ನ ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ.


ಇಸ್ರೇಲ್ ದಾಳಿಯ ಸಮಯದಲ್ಲಿ ಇರಾನ್ ವಾಯು ರಕ್ಷಣಾ ವ್ಯವಸ್ಥೆಗಳು ಸಕ್ರಿಯಗೊಂಡಿವೆ. ಆದರೆ ಕೆಲವು ಸ್ಥಳಗಳಿಗೆ ಸೀಮಿತ ಹಾನಿಯಷ್ಟೇ ಉಂಟಾಗಿದೆ ಎಂದು ಇರಾನ್ ಹೇಳಿದೆ.


ಇಸ್ರೇಲ್ ಸೇನೆಯು ಇರಾನ್ ನಲ್ಲಿನ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆ ದಾಳಿಗಳನ್ನು ನಡೆಸಿತ್ತು. ಇಸ್ರೇಲ್ ದಾಳಿಗಳು ಇಲಾಮ್, ಖುಜೆಸ್ತಾನ್ ಮತ್ತು ಟೆಹ್ರಾನ್ ಪ್ರಾಂತ್ಯಗಳಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿದೆ ಎಂದು ಇರಾನ್ ನ ಮಿಲಿಟರಿ ದೃಢಪಡಿಸಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸೇರಿದ ಯಾವುದೇ ಮಿಲಿಟರಿ ಕೇಂದ್ರಕ್ಕೆ ದಾಳಿಯಿಂದ ಹಾನಿಯಾಗಿಲ್ಲ ಎಂದು ಇರಾನಿನ ಮಾಧ್ಯಮ ವರದಿಗಳು ತಿಳಿಸಿದೆ.


ಇಸ್ರೇಲ್ ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಪ್ರಕಾರ, ಇಸ್ರೇಲಿ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಿದೆ”. “ನಾವು ಇರಾನ್ ನಲ್ಲಿನ ಮಿಲಿಟರಿ ಗುರಿಗಳ ವಿರುದ್ಧ ಉದ್ದೇಶಿತ ಮತ್ತು ನಿಖರವಾದ ದಾಳಿಗಳನ್ನು ನಡೆಸಿದ್ದೇವೆ ಮತ್ತು ಇಸ್ರೇಲ್ ರಾಜ್ಯಕ್ಕೆ ತಕ್ಷಣದ ಬೆದರಿಕೆಗಳನ್ನು ವಿಫಲಗೊಳಿಸಿದ್ದೇವೆ” ಎಂದು ಅವರು ಎಕ್ಸ್ ನಲ್ಲಿ ಹೇಳಿದ್ದಾರೆ.

Join Whatsapp
Exit mobile version