ಅಹಮದಾಬಾದ್: ಐಪಿಎಲ್ ಫೈನಲ್ ಪಂದ್ಯಕ್ಕೆ ಮತ್ತೆ ಭೀತಿ ಎದುರಾಗಿದೆ. ಭಾನುವಾರ ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವನ್ನು ಮಳೆಯ ಕಾರಣ ಸೋಮವಾರಕ್ಕೆ ಮುಂದೂಡಲಾಗಿತ್ತು.
ಇಂದು ಸಂಜೆ 7.30 ಕ್ಕೆ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್ಮನ್ ಗಿಲ್ (39) – ವೃದ್ಧಿಮಾನ್ ಸಾಹ (54) ಉತ್ತಮ ಆರಂಭ ಒದಗಿಸಿದ್ದರು.
ಆ ಬಳಿಕ ಬಂದ ಸಾಯಿ ಸುದರ್ಶನ್ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ 96 ರನ್ ಚಚ್ಚಿದರು. ಪರಿಣಾಮ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದೆ.
ಇದೀಗ ಸಿಎಸ್ಕೆ ತಂಡದ ಬ್ಯಾಟಿಂಗ್ ಶುರುವಾಗಿದ್ದು, ಈ ವೇಳೆ ಮಳೆ ಎದುರಾಗಿದೆ. ಹೀಗಾಗಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸದ್ಯ ಮೊದಲ ಓವರ್ನ 3 ಎಸೆತಗಳಲ್ಲಿ 4 ರನ್ ಕಲೆಹಾಕಿರುವ ಸಿಎಸ್ಕೆಗೆ ಗೆಲ್ಲಲು ಇನ್ನು 211 ರನ್ಗಳ ಅವಶ್ಯಕತೆಯಿದೆ.
ಒಂದು ವೇಳೆ ಡಕ್ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಿ ಓವರ್ಗಳ ಕಡಿತ ಮಾಡಿದರೆ ಸಿಎಸ್ಕೆ ತಂಡದ ಟಾರ್ಗೆಟ್ ಬದಲಾಗಲಿದೆ. ಇಲ್ಲಿ 5 ಓವರ್ಗಳ ಪಂದ್ಯ ನಡೆಸಿದರೆ ಸಿಎಸ್ಕೆ 66 ರನ್ ಕಲೆಹಾಕಬೇಕಾಗುತ್ತದೆ.
ಹಾಗೆಯೇ 10 ಓವರ್ಗಳ ಪಂದ್ಯವನ್ನು ನಡೆಸಿದರೆ ಸಿಎಸ್ಕೆ 123 ರನ್ಗಳಿಸಬೇಕಾಗುತ್ತದೆ. ಇನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ ಪಂದ್ಯವನ್ನು ನಡೆಸಿದರೆ ಸಿಎಸ್ಕೆ ಮುಂದೆ 171 ರನ್ಗಳ ಗುರಿ ಇರಲಿದೆ.