Home ಜಾಲತಾಣದಿಂದ ರಸ್ತೆ ಇಲ್ಲವೆಂದು ಅರ್ಧ ದಾರಿಯಲ್ಲೇ ನಿಂತ ಆಂಬ್ಯುಲೆನ್ಸ್; ಮಗು ಮೃತ್ಯು

ರಸ್ತೆ ಇಲ್ಲವೆಂದು ಅರ್ಧ ದಾರಿಯಲ್ಲೇ ನಿಂತ ಆಂಬ್ಯುಲೆನ್ಸ್; ಮಗು ಮೃತ್ಯು

ಚೆನ್ನೈ: ಹಾವು ಕಚ್ಚಿದ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಗುವಿಗೆ 18 ತಿಂಗಳಾಗಿತ್ತು. ಮಗುವಿಗೆ ಹಾವು ಕಚ್ಚಿದ ಕೂಡಲೇ ಆಸ್ಪತ್ರೆ ಕರೆದುಕೊಂಡು ಹೋಗಲು ಆ್ಯಂಬಲೆನ್ಸ್‌ನಲ್ಲಿ ಬಂದಿದ್ದಾರೆ. ಆದರೆ, ಗುಡ್ಡಗಾಡು ಪ್ರದೇಶದಲ್ಲಿ ಸರಿಯಾದ ರಸ್ತೆ ಇಲ್ಲದ್ದರಿಂದ ಆ್ಯಂಬುಲೆನ್ಸ್ ಮುಂದೆ ಹೋಗಲು ಸಾಧ್ಯವಾಗಿಲ್ಲ. ಆಗ, ತಾಯಿಯು ಮಗುವನ್ನು ಹೊತ್ತುಕೊಂಡು 6 ಕಿ.ಮೀ ನಡೆದು ಬರುವಷ್ಟರಲ್ಲಿ ಮಗುವ ಮೃತಪಟ್ಟಿದೆ.

ಮಾಧ್ಯಮಗಳ ವರದಿಗಳ ಪ್ರಕಾರ, ರಸ್ತೆ ಸರಿ ಇಲ್ಲದ ಕಾರಣ ಆ್ಯಂಬುಲೆನ್ಸ್ ಅವರನ್ನು ಮಧ್ಯದಲ್ಲಿ ಬಿಡಬೇಕಾಗಿ ಬಂದ ಕಾರಣ ತಾಯಿ ಮಗುವನ್ನು 6 ಕಿಲೋಮೀಟರ್ ಬೆಟ್ಟವನ್ನು ಹತ್ತಬೇಕಾಯಿತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಮಗು ಸಾವನ್ನಪ್ಪಿದೆ. ಈ ಭಾಗದಲ್ಲಿ ಸರಿಯಾದ ರಸ್ತೆಗಳು ಇಲ್ಲದಿರುವುದೇ ಮಗು ಸಾಯಲು ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

Join Whatsapp
Exit mobile version