Home ಕ್ರೀಡೆ ಭಾರತದಲ್ಲೇ IPL-2022: BCCI ಕಾರ್ಯದರ್ಶಿ ಜಯ್ ಶಾ

ಭಾರತದಲ್ಲೇ IPL-2022: BCCI ಕಾರ್ಯದರ್ಶಿ ಜಯ್ ಶಾ

ನವದೆಹಲಿ: ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್, IPL  ಟೂರ್ನಿ, ಮುಂದಿನ ವರ್ಷ ಭಾರತದಲ್ಲೇ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ BCCIಯ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

‘15ನೇ ಆವೃತ್ತಿಯ ಐಪಿಎಲ್ ಭಾರತದಲ್ಲೇ ನಡೆಯಲಿದೆ. 2 ಹೊಸ ತಂಡಗಳ ಸೇರ್ಪಡೆಯೊಂದಿಗೆ ಟೂರ್ನಿಯು ಮತ್ತಷ್ಟು ರೋಚಕವಾಗಿರಲಿದೆ. ಮೆಗಾ ಹರಾಜು ನಡೆಯಲಿದ್ದು, ಹೊಸ ತಂಡಗಳು ಹೇಗಿರಲಿವೆ ಎಂಬುದರ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಜಯ್ ಶಾ ತಿಳಿಸಿರುವುದಾಗಿ ANI ಟ್ವೀಟ್ ಮಾಡಿದೆ.

ಅಹಮದಾಬಾದ್‌ ಮತ್ತು ಲಖನೌ ಫ್ರಾಂಚೈಸಿಗಳು IPL-2022ಗೆ ಸೇರ್ಪಡೆಯಾಗಿವೆ. ಹರಾಜು ನೀತಿ ಹಾಗೂ ಆಟಗಾರರನ್ನು ಉಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿವರಗಳನ್ನು BCCI ಕಳೆದ ತಿಂಗಳು ಪ್ರಕಟಿಸಿತ್ತು.

2021ನೇ ಸಾಲಿನ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭಗೊಂಡಿತ್ತಾದರೂ ಕೆಲವು ಆಟಗಾರರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರಿಂದ ಟೂರ್ನಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಬಳಿಕ ಉಳಿದ ಪಂದ್ಯಗಳನ್ನು UAEಯಲ್ಲಿ ಆಯೋಜಿಸಲಾಗಿತ್ತು. ಪೈನಲ್’ನಲ್ಲಿ KKR ತಂಡವನ್ನು ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 3ನೇ ಬಾರಿಗೆ ಚಾಂಪಿಯನ್ ಆಗಿತ್ತು.

Join Whatsapp
Exit mobile version