ಇನ್ನು ಮುಂದೆ ಸರ್ವರ್ ಡೌನ್ ಸಮಸ್ಯೆ ಇರಲ್ಲ: ಇನ್ ಸ್ಟಾಗ್ರಾಮ್ ಸ್ಪಷ್ಟನೆ

Prasthutha|

ನವದೆಹಲಿ: ಇನ್ನು ಮುಂದೆ ಇನ್ ಸ್ಟಾಗ್ರಾಮ್ ನಲ್ಲಿ ಸರ್ವರ್ ಡೌನ್ ಸಮಸ್ಯೆ ಇರಲ್ಲ. ದೋಷ ಸರಿಪಡಿಸಲಾಗಿದೆ ಎಂದು ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ.

- Advertisement -


ಕೆಲವು ಖಾತೆಗಳು ಅಮಾನತು ಆಗಿರುವುದಕ್ಕೆ ಕ್ಷಮೆ ಕೇಳಿದೆ. ಕೆಲ ದಿನಗಳ ಹಿಂದೆ ಉಚಿತ ಸಂದೇಶ ಕಳುಹಿಸುವ ಜನಪ್ರಿಯ ಆ್ಯಪ್ ವಾಟ್ಸಪ್ ನಲ್ಲೂ ತಾಂತ್ರಿಕ ದೋಷ ಉಂಟಾಗಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿತ್ತು. ಕಳೆದ ರಾತ್ರಿ ಇನ್ಸ್ಟಾಗ್ರಾಮ್ ಸರ್ವರ್ ಕೂಡಾ ಡೌನ್ ಆಗಿದ್ದು ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಈ ವಿಚಾರವನ್ನು ಸಂಸ್ಥೆಯೇ ಪೋಸ್ಟ್ ಮಾಡಿ ತಿಳಿಸಿತ್ತು.


ಈ ತಾಂತ್ರಿಕ ದೋಷದಿಂದಾಗಿ ಖ್ಯಾತ ಫುಟ್ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರು ತಮ್ಮ 3 ಮಿಲಿಯನ್ ಹಿಂಬಾಲಕರನ್ನು ಕಳೆದುಕೊಂಡಿದ್ದರು. ಅಲ್ಲದೇ ಸ್ವತಃ ಇನ್ಸ್ಟಾಗ್ರಾಮ್ ತನ್ನ ಒಂದು ಮಿಲಿಯನ್ ಹಿಂಬಾಲಕರನ್ನು ಕಳೆದುಕೊಂಡಿದೆ.



Join Whatsapp
Exit mobile version