ನಟಿ ರಂಭಾ ಕಾರು ಭೀಕರ ಅಪಘಾತ: ಪುತ್ರಿಗೆ ಗಂಭೀರ ಗಾಯ

Prasthutha|

ಬೆಂಗಳೂರು: 90ರ ದಶಕದ ಬಹು ಭಾಷ ನಟಿ ರಂಭಾ ಅವರ ಕಾರು ಅಪಘಾತವಾಗಿದ್ದು, ರಂಭಾ ಪುತ್ರಿ ಸಾಶಾ ಗಂಭೀರ ಗಾಯಗೊಂಡಿದ್ದಾರೆ.

- Advertisement -


ರಂಭಾಗೆ ಕೂಡ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಅವರು ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಮಗಳಿಗೆ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ರಂಭಾ ಮತ್ತು ಪತಿ ಇಂದ್ರಕುಮಾರ್ ಪದ್ಮನಾಥನ್ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರನಿದ್ದಾನೆ.


ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ರಂಭಾ ಕಾರಿನಲ್ಲಿ ಇಬ್ಬರು ಮಕ್ಕಳಲ್ಲದೆ ಕೆಲಸದಾಕೆ ಕೂಡಾ ಇದ್ದರು ಎಂದು ಹೇಳಲಾಗುತ್ತಿದೆ.



Join Whatsapp
Exit mobile version