ಉತ್ತರ ಪ್ರದೇಶ: ತನ್ನ ನಾಪತ್ತೆಯಾದ ಸೋದರ ಸೊಸೆಯ ತನಿಖೆಯ ಹಂತದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯ ಕೆನ್ನೆಗೆ ಪೊಲೀಸ್ ಇನ್‌ಸ್ಪೆಕ್ಟರ್ ಬಾರಿಸಿದ ಘಟನೆ ಇಲ್ಲಿನ ಬಿನೌಲಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಇನ್‌ಸ್ಪೆಕ್ಟರ್‌ನ್ನು ವರ್ಗಾವಣೆ ಮಾಡಲಾಗಿದೆ.
ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಯುವತಿಯ ಬಗ್ಗೆ ಬಿನೌಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯ ಹಂತ ತಿಳಿಯಲು ಶನಿವಾರ ಮತ್ತೆ ಯುವತಿಯ ಕುಟುಂಬಸ್ಥರು ಠಾಣೆಗೆ ಬಂದಿದ್ದರು. ಈ ವೇಳೆ ಯುವತಿಯ ಮಾವ ಇನ್‌ಸ್ಪೆಕ್ಟರ್ ಬಳಿ ತನಿಖೆ ಯಾವ ಹಂತದಲ್ಲಿದೆ ಎಂದು ಕೇಳಿದಾಗ ಕನ್ನೆಗೆ ಬಾರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಬಿರ್ಜಾ ರಾಮ್ ಅವರನ್ನು ವರ್ಗಾವಣೆ ಮಾಡಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ.
“ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಈ ವಿಚಾರವಾಗಿ ನಾವು ಗಮನಹರಿಸಿದ್ದೇವೆ. ಸೆಪ್ಟೆಂಬರ್ 17ರಂದು ಇನ್‌ಸ್ಪೆಕ್ಟರ್ ಬಿರ್ಜಾ ರಾಮ್ ಸಂತ್ರಸ್ತೆಯ ಕುಟುಂಬದೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಇನ್‌ಸ್ಪೆಕ್ಟರ್ ಬಿರ್ಜಾ ರಾಮ್ ಅವರನ್ನು ವರ್ಗಾಯಿಸಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಲಾಗಿದೆ ಎಂದು ಬಾಗ್‌ಪತ್‌ನ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಹೇಳಿದ್ದಾರೆ.