Home ಟಾಪ್ ಸುದ್ದಿಗಳು ನಿನ್ನೆ ನಡೆದ ಲೋಕಾಯುಕ್ತ ದಾಳಿಯಲ್ಲಿ 11 ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿಗಳ ಮಾಹಿತಿ

ನಿನ್ನೆ ನಡೆದ ಲೋಕಾಯುಕ್ತ ದಾಳಿಯಲ್ಲಿ 11 ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಬೆಳ್ಳಂಬೆಳಗ್ಗೆಯೇ ವಿವಿಧ ಇಲಾಖೆಗಳ ನಿವೃತ್ತ ಇಂಜಿನಿಯರ್​ ಸೇರಿ 11 ಅಧಿಕಾರಿಗಳಿಗೆ ಸಂಬಂಧಿಸಿದ 50 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಒಟ್ಟು 9 ಜಿಲ್ಲೆಗಳಲ್ಲಿ ನಡೆದ ದಾಳಿಯಲ್ಲಿ ಯಾರ್ಯಾರ ಬಳಿ ಏನೇನು ಪತ್ತೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಮಹದೇವ ಬನ್ನೂರು-ಎಇಇ ಪಿಡಬ್ಲ್ಯೂಡಿ ಇಲಾಖೆ, ಬೆಳಗಾವಿ

ನಾಲ್ಕು ಕಡೆಗಳಲ್ಲಿ ದಾಳಿ,
1 ಕೋಟಿ ಮೌಲ್ಯದ ಮೂರು ವಾಸದ ಮನೆ
1.84 ಲಕ್ಷ ನಗದು ಹಣ, 20 ಲಕ್ಷ ಮೌಲ್ಯದ ಚಿನ್ನಾಭರಣ
7.50 ಲಕ್ಷ ಬೆಲೆಬಾಳುವ ವಾಹನ
ಒಟ್ಟು 97.51 ಲಕ್ಷ ಮೌಲ್ಯದ ಆಸ್ತಿ ಪತ್ತೆ

ಡಿ ಹೆಚ್ ಉಮೇಶ್, ಇಇ ಕೆಪಿಟಿಸಿಎಲ್, ಚಿಕ್ಕಮಗಳೂರು

ಐದು ಕಡೆಗಳಲ್ಲಿ ದಾಳಿ
ನಾಲ್ಕು ನಿವೇಶನ, ನಾಲ್ಕು ವಾಸದ ಮನೆ, ಎರಡು ಎಕರೆ ಕೃಷಿ ಜಮೀನು
40 ಲಕ್ಷ ಬೆಲೆಬಾಳುವ ಚಿನ್ನಾಭರಣ
15 ಲಕ್ಷ ಬೆಲೆಬಾಳುವ ವಾಹನಗಳು
ಒಟ್ಟು 5.38 ಕೋಟಿ ಮೌಲ್ಯದ ಆಸ್ತಿ ಪತ್ತೆ

ಎಸ್ ಪ್ರಭಾಕರ್, ಎಇಇ ಬೆಸ್ಕಾಂ ವಿಜಿಲೇನ್ಸ್, ದಾವಣಗೆರೆ

ನಾಲ್ಕು ಕಡೆಗಳಲ್ಲಿ ದಾಳಿ ಶೋಧ
ಎರಡು ನಿವೇಶನ, ಎರಡು ವಾಸದ ಮನೆ, 4.33 ಎಕರೆ ಕೃಷಿ ಜಮೀನು
30 ಲಕ್ಷ ಬೆಲೆಬಾಳುವ ಚಿನ್ನಾಭರಣ
50 ಸಾವಿರ ಬೆಲೆಬಾಳುವ ವಾಹನ, 10 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
ಒಟ್ಟು 2.01 ಕೋಟಿ ಮೌಲ್ಯದ ಆಸ್ತಿ ಪತ್ತೆ

ಶೇಖರ್ ಗೌಡ ಹನುಮನಗೌಡ ಕುರಡಗಿ, ಯೋಜನಾ ನಿರ್ದೇಶಕ ನಿರ್ಮಿತಿ ಕೇಂದ್ರ ಬೆಳಗಾವಿ

ಏಳು ಕಡೆಗಳಲ್ಲಿ ದಾಳಿ
ಐದು ನಿವೇಶನ, ನಾಲ್ಕು ವಾಸದ ಮನೆ, 83 ಎಕರೆ ಕೃಷಿ ಜಮೀನು
16.90 ಲಕ್ಷ ಬೆಲೆಬಾಳುವ ಚಿನ್ನಾಭರಣ, 8.45 ಲಕ್ಷ ಮೌಲ್ಯದ ವಾಹನಗಳು,
88 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು
ಒಟ್ಟು 7.88 ಕೋಟಿ ಮೌಲ್ಯದ ಆಸ್ತಿ ಪತ್ತೆ

ಎಂ ರವೀಂದ್ರ, ನಿವೃತ್ತ ಮುಖ್ಯ ಅಭಿಯಂತರ, ಪಿಡಬ್ಲ್ಯೂಡಿ

ನಾಲ್ಕು ಕಡೆಗಳಲ್ಲಿ ದಾಳಿ
ನಾಲ್ಕು ನಿವೇಶನ, ಆರು ವಾಸದ ಮನೆ ಕೃಷಿ ಜಮೀನು ಸೇರಿ 3 ಕೋಟಿ ಮೌಲ್ಯದ ಜಮೀನು ಪತ್ತೆ
83 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ಕೋಟಿ ಬೆಲೆಬಾಳುವ ವಾಹನಗಳು‌,
50 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
ಒಟ್ಟು 5.75 ಕೋಟಿ ಮೌಲ್ಯದ ಆಸ್ತಿ ಪತ್ತೆ

ಕೆ ಜಿ ಜಗದೀಶ್, ಮುಖ್ಯ ಅಭಿಯಂತರ ಲೋಕೊಪಯೋಗಿ ಇಲಾಖೆ

ಐದು ಕಡೆಗಳಲ್ಲಿ ದಾಳಿ
ಐದು ನಿವೇಶನ, ಏಳುವಾಸದ ಮನೆ, 36 ಎಕರೆ ಕೃಷಿ ಜಮೀನು
3 ಲಕ್ಷ ಮೌಲ್ಯದ ಚಿನ್ನಾಭರಣ, 18 ಲಕ್ಷ ಮೌಲ್ಯದ ವಾಹನಗಳು
5.26 ಕೋಟಿ ಮೌಲ್ಯದ ಆಸ್ತಿ ಪತ್ತೆ

ಶಿವರಾಜ್, ನಿವೃತ್ತ ಇಇ ಗ್ರಾಮೀಣ ಕುಡಿಯುವ ನೀರು, ಮಂಡ್ಯ

ಆರು ಕಡೆಗಳಲ್ಲಿ ದಾಳಿ, ಮೂರು ನಿವೇಶನ, ಮೂರುವಾಸದ ಮನೆ,
ಹತ್ತು ಎಕರೆ ಕೃಷಿ ಜಮೀನು
ಆರು ಲಕ್ಷ ನಗದು, ಎಂಟು ಲಕ್ಷ ಬೆಲೆಬಾಳುವ ಚಿನ್ನಾಭರಣ
90 ಲಕ್ಷ ಬೆಲೆಬಾಳುವ ವಾಹನಗಳು
ಎರಡು ಕೋಟಿ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು
ಒಟ್ಟು 5.08 ಕೋಟಿ ಮೌಲ್ಯದ ಆಸ್ತಿ ಪತ್ತೆ

ವಿಜಯಣ್ಣ, ತಹಶೀಲ್ದಾರ್ ಹಾರೋಹಳ್ಳಿ

ಆರು ಕಡೆಗಳಲ್ಲಿ ದಾಳಿ,
ಒಂಭತ್ತು ವಾಸದ ಮನೆ, 13 ಎಕರೆ ಕೃಷಿ ಜಮೀನು,
ಎರಡು ಲಕ್ಷ ನಗದು, 22 ಲಕ್ಷ ಮೌಲ್ಯದ ಚಿನ್ನಾಭರಣ,
43 ಲಕ್ಷ ಮೌಲ್ಯದ ವಾಹನಗಳು
34 ಲಕ್ಷ ಮೌಲ್ತದ ಗೃಹೋಪಯೋಗಿ ವಸ್ತುಗಳು.
ಒಟ್ಟು 2.45 ಕೋಟಿ ಆಸ್ತಿ ಪತ್ತೆ.

ಮಹೇಶ್ ಕೆ, ಅಧಿಕ್ಷಕ ಅಭಿಯಂತರ ಕಬಿನಿ ಮತ್ತು ವರುಣಾ ನಾಲಾ ಮೈಸೂರು

ಮೂರು ಕಡೆಗಳಲ್ಲಿ ದಾಳಿ,
ಮೂರು ನಿವೇಶನ, ಮೂರು ವಾಸದ ಮನೆಗಳು, 11 ಎಕರೆ ಕೃಷಿ ಜಮೀನು
22.80 ಲಕ್ಷ ಮೌಲ್ಯದ ಚಿನ್ನಾಭರಣ, ನಾಲ್ಕು ಲಕ್ಷದ ವಾಹನ
76 ಲಕ್ಷದ ಇತರೆ ವಸ್ತುಗಳು
ಒಟ್ಟು 3.79 ಕೋಟಿ ಮೌಲ್ಯದ ಅಸ್ತಿ ಪತ್ತೆ.

ಎಂ ಎನ್ ಜಗದೀಶ್, ಗ್ರೇಡ್ -1 ಕಾರ್ಯದರ್ಶಿ, ದಾಸನಪುರ ಗ್ರಾಮಪಂಚಾಯ್ತಿ

ಮೂರು ಕಡೆಗಳಲ್ಲಿ ದಾಳಿ,
ಮೂರು ವಾಸದ ಮನೆ, 2.28 ಎಕರೆ ಕೃಷಿ ಜಮೀನು
28 ಲಕ್ಷ ನಗದು, 1.21 ಕೋಟಿ ಮೌಲ್ಯದ ಚಿನ್ನಾಭರಣ
33 ಲಕ್ಷ ಮೌಲ್ಯದ ವಾಹನಗಳು
ಒಟ್ಟು 3.22 ಕೋಟಿ ಮೌಲ್ಯದ ಅಸ್ತಿ ಪತ್ತೆ.

ಬಸವರಾಜ್ ಮಗಿ, ಕಂದಾಯ ಅಧಿಕಾರಿ ಬಿಬಿಎಂಪಿ ಮಹದೇವಪುರ

11 ಕಡೆಗಳಲ್ಲಿ ದಾಳಿ, 15 ನಿವೇಶನ, ಎರಡು ವಾಸದ ಮನೆ,
32 ಎಕರೆ ಕೃಷಿ ಜಮೀನು, 59 ಲಕ್ಷ ಮೌಲ್ಯದ ಚಿನ್ನಾಭರಣ.
583 ಕ್ಯಾಸಿನೋ ಕಾಯಿನ್ಸ್ ಪತ್ತೆ
ಒಟ್ಟು 3.31 ಕೋಟಿ ಮೌಲ್ಯದ ಆಸ್ತಿ ಪತ್ತೆ

Join Whatsapp
Exit mobile version