ಜಕಾರ್ತ: ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 318 ಕ್ಕೆ ಏರಿದೆ.
ಅಲ್ಲದೆ, 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಏಜೆನ್ಸಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಭೂಕಂಪದಿಂದ ಸಿಯಾಂಜೂರ್ ಜಿಲ್ಲೆಯಲ್ಲಿ 7,729 ಜನರು ಗಾಯಗೊಂಡಿದ್ದು, 58,049 ಮನೆಗಳು ನಾಶವಾಗಿವೆ. 73,693 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.