Home ಗಲ್ಫ್ ಸೌದಿ ಅರೇಬಿಯಾದಲ್ಲಿ ಭಾರತದ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆ

ಸೌದಿ ಅರೇಬಿಯಾದಲ್ಲಿ ಭಾರತದ 78ನೇ ಸ್ವಾತಂತ್ರ್ಯ ಸಂಭ್ರಮಾಚರಣೆ

0

ಸೌದಿ: Friendly cricketers Al AHSA ಇದರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಲೀಲ್ ಕೃಷ್ಣಾಪುರ ವಹಿಸಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡ ಮೊಹಮ್ಮದ್ ಆಲಿ ಜಿನ್ನಾ ತಮಿಳುನಾಡು, ಮೊಹಿದ್ದೀನ್ ಬಾತಿಷಾ ಜಿಕೆ, ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಲೀಂ ಗುರುವಾಯನಕೆರೆ, ಗಲ್ಫ್ ಕಮಿಟಿ ಇದರ ಅಧ್ಯಕ್ಷರು ಸ್ವಾತಂತ್ರ್ಯದ ಬಗ್ಗೆ ಹಿತವಚನಗಳನ್ನು ನುಡಿದರು.

ವೇದಿಕೆಯಲ್ಲಿ ಇಸಾಕ್ ಕಣ್ಣೂರ್, ಶಾಮಿಲ್ ಕೈಕಂಬ, ಅಬ್ಬು ಬಜಗೋಳಿ,ಮುಶೀರ್ ಖಾನ್ ಕಾರ್ಕಳ,ನೌಶಾದ್,ಬಷೀರ್,ಶಾಭಿತ್ ಹಾಜರಿದ್ದರು.

ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಹಿರಿಯರಿಗೆ ಕ್ರಿಕೆಟ್ ಪಂದ್ಯಾ ಕೂಟವನ್ನು ಆಯೋಜಿಸಲಾಗಿತ್ತು ಪ್ರಥಮ ಸ್ಥಾನವನ್ನು ಮುಶೀರ್ ವಾರಿಯರ್ಸ್ ಹಾಗೂ ದ್ವಿತೀಯ ಸ್ಥಾನವನ್ನು ಜಲೀಲ್ ಸ್ಟ್ರೈಕರ್ಸ್ ತನ್ನದಾಗಿಸಿಕೊಂಡಿತು, ಪಂದ್ಯಶ್ರೇಷ್ಠ ಮುಶೀರ್ ಪಾಲಾದರೆ ಸರಣಿಶ್ರೇಷ್ಠ ನೂರಿಸ್ ಪಡೆದುಕೊಂಡರು. ಸ್ವಾಗತ ಭಾಷಣ ಎಂ.ಜಿ. ನಝೀರ್ ನೆರವೇರಿಸಿದರು. ಅಬ್ದುಲ್ ಸಮದ್ ಕಾರ್ಯಕ್ರಮವನ್ನು ನಿರೂಪಿಸಿದರು. ನೂರಿಸ್ ಬಜಾಲ್ ವಂದಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version