Home ಗಲ್ಫ್ ಅಬುಧಾಬಿಯಲ್ಲಿ ಕೊಲ್ಲಲ್ಪಟ್ಟ ಭಾರತೀಯರ ಗುರುತು ಪತ್ತೆ; ಶವಗಳನ್ನು ಭಾರತಕ್ಕೆ ಕಳುಹಿಸುವ ಪ್ರಯತ್ನ ಜಾರಿಯಲ್ಲಿದೆ: ರಾಯಭಾರಿ ಕಚೇರಿ

ಅಬುಧಾಬಿಯಲ್ಲಿ ಕೊಲ್ಲಲ್ಪಟ್ಟ ಭಾರತೀಯರ ಗುರುತು ಪತ್ತೆ; ಶವಗಳನ್ನು ಭಾರತಕ್ಕೆ ಕಳುಹಿಸುವ ಪ್ರಯತ್ನ ಜಾರಿಯಲ್ಲಿದೆ: ರಾಯಭಾರಿ ಕಚೇರಿ

ದುಬೈ: ಸೋಮವಾರ ಅಬುಧಾಬಿಯಲ್ಲಿ ನಡೆದ ಶಂಕಿತ ಡೋನ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯ ಪ್ರಜೆಗಳನ್ನು ಗುರುತಿಸಲಾಗಿದೆ ಎಂದು ಯುಎಇಯ ರಾಯಭಾರಿ ಕಚೇರಿ ಮಂಗಳವಾರ ಮಾಹಿತಿ ನೀಡಿದೆ.

ಮಾತ್ರವಲ್ಲ ಈ ದಾಳಿಯಲ್ಲಿ ಗಾಯಗೊಂಡ ಆರು ಮಂದಿಯಲ್ಲಿ ಇಬ್ಬರು ಭಾರತೀಯರು ಎಂದು ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ರಾಯಭಾರಿ ಕಚೇರಿ, ಮೃತ ಭಾರತೀಯರ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಕುಟುಂಬದ ಸದಸ್ಯರನ್ನು ಸಂಪರ್ಕಿಸಲಾಗಿದೆ. ಈ ಸಂಬಂಧ ADNOC ಕಂಪೆನಿ ಸೇರಿದಂತೆ ಯುಎಇ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.

ಸೋಮವಾರ ಮಧ್ಯಾಹ್ನ ನಡೆದ ಶಂಕಿತ ಡ್ರೋನ್ ದಾಳಿಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಇಬ್ಬರು ಭಾರತೀಯ ಮತ್ತು ಮತ್ತೊಬ್ಬ ಪಾಕಿಸ್ತಾನಿ ಪ್ರಜೆ ಎಂದು ಗುರುತಿಸಲಾಗಿದೆ.

Join Whatsapp
Exit mobile version