Home ಟಾಪ್ ಸುದ್ದಿಗಳು ಮೋದಿಯನ್ನು ದೂಷಿಸಬಲ್ಲೆ, ಮುಗಿಸಬಲ್ಲೆ: ಕಾಂಗ್ರೆಸ್ ನಾಯಕ ನಾನಾ ಪಟೋಲೆ

ಮೋದಿಯನ್ನು ದೂಷಿಸಬಲ್ಲೆ, ಮುಗಿಸಬಲ್ಲೆ: ಕಾಂಗ್ರೆಸ್ ನಾಯಕ ನಾನಾ ಪಟೋಲೆ

ಮುಂಬೈ: “ಅಗತ್ಯಬಿದ್ದರೆ ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡುತ್ತೇನೆ, ನಿಂದಿಸುತ್ತೇನೆ” ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಭಂಡಾರಾ ಜಿಲ್ಲೆ ಲಖಾನಿ ತಹಸಿಲ್’ನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪರಿಷತ್ ಹಾಗೂ ಪಂಚಾಯತ್ ಸಮಿತಿಯ ಚುನಾವಣಾ ಪೂರ್ವ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ನಾನಾ ಪಟೋಲೆ ಈ ಹೇಳಿಕೆ ನೀಡಿದ್ದಾರೆ.


“ಕಳೆದ 30 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಆದರೆ, ನನ್ನ ಹೆಸರಿನಲ್ಲಿ ಒಂದು ಶಾಲೆಯೂ ಇಲ್ಲ, ನಾನು ಎಲ್ಲರಿಗೂ ಸಹಾಯ ಮಾಡಿದ್ದೇನೆ. ನಾನು ಮೋದಿ ಅವರನ್ನು ದೂಷಿಸಬಲ್ಲೆ. ಮುಗಿಸಬಲ್ಲೆ, ಹಾಗಾಗಿ ಮೋದಿ ನನ್ನ ವಿರುದ್ಧ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಓರ್ವ ಪ್ರಾಮಾಣಿಕ ನಾಯಕನಾಗಿ ನಿಮ್ಮ ಮುಂದೆ ಇದ್ದೇನೆ ಎಂದು ನಾನಾ ಪಟೋಲೆ ಹೇಳಿದರು.
ಪಟೋಲೆ ಹೇಳಿಕೆಯ ವೀಡಿಯೋವನ್ನು ಖಂಡಿಸಿ ವಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ಇತ್ತೀಚೆಗಷ್ಟೇ ಪಂಜಾಬ್’ನ ಫಿರೋಜ್ ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ವಾಹನ ಭದ್ರತಾ ಲೋಪದ ಕಾರಣ ಮೇಲು ಸೇತುವೆಯೊಂದರ ಮೇಲೆ 20 ನಿಮಿಷ ನಿಂತಿತ್ತು. ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಕಾಂಗ್ರೆಸ್, ಈಗ ಮೋದಿ ಅವರನ್ನೇ ಮುಗಿಸಬಲ್ಲೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೊಲೆ ಹೇಳುತ್ತಿದ್ದಾರೆ ಎಂದು ಫಡ್ನವೀಸ್ ಟೀಕಿಸಿದ್ದಾರೆ.

Join Whatsapp
Exit mobile version