Home Uncategorized ಮ್ಯಾರಥಾನ್‌ಗೆ ಭಾರತ ಪ್ರತಿನಿಧಿಯಾಗಿ ಕೊಡಗಿನ ಪ್ರತಿಭೆ ಆಯ್ಕೆ

ಮ್ಯಾರಥಾನ್‌ಗೆ ಭಾರತ ಪ್ರತಿನಿಧಿಯಾಗಿ ಕೊಡಗಿನ ಪ್ರತಿಭೆ ಆಯ್ಕೆ

ಮಡಿಕೇರಿ: ಇದೇ ಜನವರಿ ಹತ್ತರಂದು ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿರುವ ಮ್ಯಾರಥಾನ್‌ಗೆ ಭಾರತ ಪ್ರತಿನಿಧಿಯಾಗಿ ಕೊಡಗಿನ ಬೆಳ್ಳಿಯ್ಯಪ್ಪ ಭಾಗವಹಿಸಲಿದ್ದಾರೆ.

ಕೊಡಗು ಜಿಲ್ಲೆಯ ಟಿ.ಶೆಟ್ಟಿಗೇರಿಯ ಎ.ಪಿ ಅಪ್ಪಯ್ಯ ಹಾಗೂ ಎ.ಬಿ ರೋಜಾ ದಂಪತಿಯ ಮಗನಾದ ಅಪ್ಪಚ್ಚಂಗಡ ಬೆಳ್ಳಿಯ್ಯಪ್ಪ ಮ್ಯಾರಥಾನ್ ನಲ್ಲಿ ಜಯಗಳಿಸಿದರೆ, ಏಷ್ಯನ್ ಗೇಮ್ಸ್ ಹಾಗೂ ಕ್ವಾಮನ್ವೆಲ್ತ್ ಗೇಮ್ಸ್ ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ.


ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ಮ್ಯಾರಥಾನ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಹೆಗ್ಗಳಿಕೆಗೆ ಅಪ್ಪಚ್ಚಂಗಡ ಬೆಳ್ಳಿಯ್ಯಪ್ಪ ಭಾಜನರಾಗಿದ್ದಾರೆ.

Join Whatsapp
Exit mobile version