Home ಟಾಪ್ ಸುದ್ದಿಗಳು ಭಾರತ ಪ್ರಧಾನಿ-ಇಸ್ರೇಲ್ ಅಧ್ಯಕ್ಷ ಭೇಟಿ: ಪ್ಯಾಲೆಸ್ತೀನ್ ಪರ ಭಾರತದ ಬೆಂಬಲ ಪುನರುಚ್ಚಾರ

ಭಾರತ ಪ್ರಧಾನಿ-ಇಸ್ರೇಲ್ ಅಧ್ಯಕ್ಷ ಭೇಟಿ: ಪ್ಯಾಲೆಸ್ತೀನ್ ಪರ ಭಾರತದ ಬೆಂಬಲ ಪುನರುಚ್ಚಾರ

ನವದೆಹಲಿ: COP28 ವಿಶ್ವ ಹವಾಮಾನ ಆಕ್ಷನ್ ಶೃಂಗಸಭೆ(WCAS) ಇದರ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರನ್ನು ಭೇಟಿಯಾಗಿದ್ದಾರೆ. ಉಭಯ ನಾಯಕರು ಇಸ್ರೇಲ್-ಹಮಾಸ್ ಸಂಘರ್ಷದ ಕುರಿತುಜ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಭಾರತದ ಪ್ರಧಾನಿ ಮೋದಿ ಎರಡು ದೇಶಗಳ ಪರಿಹಾರಕ್ಕಾಗಿ ಭಾರತದ ಬೆಂಬಲದ ಬಗ್ಗೆ ತಿಳಿಸುತ್ತಾ, ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕರೆ ನೀಡಿದ್ದಾರೆ.

ಪ್ಯಾಲೆಸ್ತೀನ್ ಜನರ ಮೇಲಿನ ದಾಳಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ಮೋದಿ, ಸಂತ್ರಸ್ತ ಪ್ಯಾಲೆಸ್ತೀನ್ ನಾಗರಿಕರಿಗೆ ಮಾನವೀಯ ನೆರವಿನ ಮತ್ತು ಬದುಕಿನ ಸುರಕ್ಷತೆಯ ಅಗತ್ಯವನ್ನು ಪುನರುಚ್ಚರಿಸಿದ್ದಾರೆ‌ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಎರಡು ದೇಶಗಳ ನಡುವೆ ಪರಿಹಾರ ಸೂತ್ರಕ್ಕೆ ಸಲಹೆ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದರು.

Join Whatsapp
Exit mobile version