Home ಟಾಪ್ ಸುದ್ದಿಗಳು ಮಿಜೋರಾಂ ಚುನಾವಣೆ ಮತ ಎಣಿಕೆ ಮುಂದೂಡಿದ ಚುನಾವಣಾ ಆಯೋಗ

ಮಿಜೋರಾಂ ಚುನಾವಣೆ ಮತ ಎಣಿಕೆ ಮುಂದೂಡಿದ ಚುನಾವಣಾ ಆಯೋಗ

ನವದೆಹಲಿ: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಚುನಾವಣಾ ಆಯೋಗ ಮುಂದೂಡಿದೆ. ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಈ ಮೊದಲು ಡಿಸೆಂಬರ್ 3 ರಂದು ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್ಗಢದ ಜೊತೆಗೆ ಮಿಜೋರಾಂ ಚುನಾವಣೆಯ ಫಲಿತಾಂಶವನ್ನು ಘೋಷಿಸೋದಾಗಿ ಚುನಾವಣಾ ಆಯೋ ತಿಳಿಸಿತ್ತು. ಈಗ ಮಿಜೋರಾಂ ಮತ ಎಣಿಕೆಯನ್ನು ಮಾತ್ರ ಒಂದು ದಿನದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದೆ.

ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಚುನಾವಣಾ ಆಯೋಗ, 2023 ರ ಡಿಸೆಂಬರ್ 3 ರಂದು ಮಿಜೋರಾಂ ಜನರಿಗೆ ವಿಶೇಷ ಮಹತ್ವದ್ದಾಗಿರುವುದರಿಂದ ಎಣಿಕೆಯ ದಿನಾಂಕವನ್ನು 2023 ರ ಡಿಸೆಂಬರ್ 3 ರ ಬದಲಿಗೆ ಬೇರೆ ದಿನಕ್ಕೆ ನಡೆಸುವಂತೆ ಕೋರಿ ಆಯೋಗವು ವಿವಿಧ ಭಾಗಗಳಿಂದ ಹಲವಾರು ಮನವಿಗಳನ್ನು ಸ್ವೀಕರಿಸಿದೆ. ಅದರಂತೆ ದಿನಾಂಕ ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.

Join Whatsapp
Exit mobile version