ದೆಹಲಿ: ಭಾರತದ ಫೇಸ್ ಬುಕ್ ಆ್ಯಾಪ್ ಸಂಸ್ಥೆಯ (ಈಗಿನ ಮೇಟಾ) ಮುಖ್ಯಸ್ಥ ಅಜಿತ್ ಮೋಹನ್ ದಿಢೀರನೇ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅಜಿತ್ 2019ರ ಆರಂಭದಲ್ಲಿ ಫೇಸ್ಬುಕ್ ಇಂಡಿಯಾಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದಕ್ಕೂ ಮೊದಲು ಹಾಟ್ಸ್ಟಾರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೇಟಾ ಕಂಪೆನಿಗೆ ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ಎಂಬ ಎರಡು ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳನ್ನು ಪರಿಚಯಿಸಿದ ಸ್ಫೂರ್ತಿ ಅಜಿತ್ ಅವರಿಗೆ ಸಲ್ಲುತ್ತದೆ. ಇವರ ಅಧಿಕಾರ ಅವಧಿಯಲ್ಲಿ ಈ ಎರಡು ಜನಪ್ರಿಯ ಆ್ಯಾಪ್ ಗಳನ್ನು ಹುಟ್ಟು ಹಾಕಿದರು.
ಕೆಲವು ಬಲ್ಲ ಮೂಲಗಳ ಮಾಹಿತಿ ಪ್ರಕಾರ ಅಜಿತ್ ಮೇಟಾ ಗೆ ರಾಜೀನಾಮೆ ನೀಡಿ ಇನ್ನೊಂದು ಸಾಮಾಜಿಕ ಮಾಧ್ಯಮವಾದ ಸ್ನ್ಯಾಪ್ಗೆ ಸೇರಲಿದ್ದಾರೆ ಎನ್ನಲಾಗುತ್ತಿದೆ.