Home ವಿದೇಶ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತೆ 10 ವಸ್ತುಗಳು: ಪ್ರತಿ ಮನೆಯಲ್ಲೂ ಆಗುತ್ತೆ ಇದರ ಬಳಕೆ

ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತೆ 10 ವಸ್ತುಗಳು: ಪ್ರತಿ ಮನೆಯಲ್ಲೂ ಆಗುತ್ತೆ ಇದರ ಬಳಕೆ

ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಹಲವು ವಸ್ತುಗಳು ಆಮದು ಆಗುತ್ತವೆ. ಭಾರತದ ಮನೆಗಳಲ್ಲಿ ಪಾಕಿಸ್ತಾನದಿಂದ ಬರುವ ವಸ್ತುಗಳ ಬಳಕೆಯಾಗುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದಿಂದ ಬರುವ ವಸ್ತುಗಳ ಸಂಖ್ಯೆ ಹಂತ ಹಂತವಾಗಿ ಇಳಿಕೆಯಾಗುತ್ತಿದೆ.


ಡ್ರೈ ಫ್ರೂಟ್ಸ್, ಚರ್ಮ, ಸೌಂದರ್ಯವರ್ಧಕಗಳಿ, ಸಿಮೆಂಟ್ ಸೇರಿದಂತೆ ಅನೇಕ ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಖರೀದಿಸುತ್ತದೆ.


ಪಾಕಿಸ್ತಾನದಿಂದ ಭಾರತ ಅತ್ಯಧಿಕವಾಗಿ ಖರೀದಿಸುವ ವಸ್ತು ಕಲ್ಲುಪ್ಪು ಅಥವಾ ಸೇಂಧಾ ನಮಕ್ (ರಾಕ್ ಸಾಲ್ಟ್). ಭಾರತ ಈ ರಾಕ್ ಸಾಲ್ಟ್ ಗೆ ಸಂಪೂರ್ಣವಾಗಿ ಪಾಕಿಸ್ತಾನದ ಮೇಲೆಯೇ ಅವಲಂಬಿತವಾಗಿದೆ.


ಹಾಗಾಗಿ ಈ ಉಪ್ಪನ್ನು ಮನೆಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ. ಇದರ ಜೊತೆಗೆ ಮುಲ್ತಾನಾ ಮಿಟ್ಟಿ, ಕಾಟನ್, ಮೆಟಲ್ ಕಾಂಪೌಂಡ್, ಸಲ್ಫರ್, ಕಲ್ಲು ಮತ್ತು ಸುಣ್ಣವನ್ನು ಸಹ ಭಾರತ ಖರೀದಿ ಮಾಡುತ್ತದೆ. ಕನ್ನಡಕಗಳಲ್ಲಿ ಬಳಕೆಯಾಗುವ ಆಪ್ಟಿಕ್ಲಸ್ ಸಹ ದೊಡ್ಡ ಪ್ರಮಾಣದಲ್ಲಿ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತದೆ.


ಪಾಕಿಸ್ತಾನದ ಚರ್ಮದ ಉತ್ಪನ್ನಗಳು, ಹಣ್ಣುಗಳು, ಕಾರ್ಬನಿಕ್ ಕೆಮಿಕಲ್ ಮತ್ತು ಮೆಟಲ್ ಕಾಂಪೌಂಡ್ ಭಾರತದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಸಕ್ಕರೆಯಿಂದ ಮಾಡಲ್ಪಡುವ ಕನ್ಫೆಕ್ಷನರಿ ಪ್ರೊಡಕ್ಟ್ ಗಳು ಸಹ ಪಾಕಿಸ್ತಾನದಿಂದಲೇ ಭಾರತಕ್ಕೆ ಬರುತ್ತವೆ. ಸ್ಟೀಲ್ ಮೇಲೆಯೂ ಸಹ ಪಾಕಿಸ್ತಾನದ ಮೇಲೆಯೇ ಭಾರತ ಅವಲಂಬಿತವಾಗಿದೆ. ತಾಮ್ರವೂ ಸಹ ಪಾಕಿಸ್ತಾನದಿಂದ ಬರುವ ವಸ್ತುಗಳಲ್ಲಿ ಒಂದಾಗಿದೆ.

Join Whatsapp
Exit mobile version