Home ಟಾಪ್ ಸುದ್ದಿಗಳು ಗಾಝಾ ಕದನವಿರಾಮ ನಿರ್ಣಯಕ್ಕೆ ಭಾರತ ಗೈರು: ವಿ‌ಪಕ್ಷಗಳಿಂದ ಪ್ರತಿಭಟನೆಗೆ ಕರೆ

ಗಾಝಾ ಕದನವಿರಾಮ ನಿರ್ಣಯಕ್ಕೆ ಭಾರತ ಗೈರು: ವಿ‌ಪಕ್ಷಗಳಿಂದ ಪ್ರತಿಭಟನೆಗೆ ಕರೆ

ನವದೆಹಲಿ: ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಗೈರು ಹಾಜರಾಗಿರುವುದು ಆಘಾತಕಾರಿಯಾದ ನಡೆಯಾಗಿದೆ. ತನ್ನ ವಿದೇಶಾಂಗ ನೀತಿಯನ್ನು ಕೈಬಿಟ್ಟು ಅಮೆರಿಕಾ ಸಾಮ್ರಾಜ್ಯಶಾಹಿಯ ಅಧೀನ ಮಿತ್ರ ಎಂದು ಸಾಬೀತುಪಡಿಸುವಂತೆ ತೋರಿಸುತ್ತದೆ ಎಂದು ಸಿಪಿಐ(ಎಂ) ಮತ್ತು ಸಿಪಿಐ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಗಾಜಾದಲ್ಲಿ ಮನುಷ್ಯರನ್ನು ಸಾಮೂಹಿಕವಾಗಿ ಕೊಲ್ಲುವುದನ್ನು ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಲು ಸಿಪಿಐ(ಎಂ) ತನ್ನ ಎಕೆಜಿ ಭವನದ ಕಚೇರಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸುವುದಾಗಿಯೂ ಹೇಳಿದೆ.

ಗಾಝಾದಲ್ಲಿ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಲ್ಲಿ ನಾಗರಿಕರ ರಕ್ಷಣೆ, ಕಾನೂನು ಮತ್ತು ಮಾನವೀಯ ಹೊಣೆಗಾರಿಕೆಯನ್ನು ಎತ್ತಿಹಿಡಿಯುವುದು ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ವಿಶ್ವಸಂಸ್ಥೆ ಜೋರ್ಡಾನ್ ಕರಡು ನಿರ್ಣಯ ಪ್ರಕಟಿಸಿತ್ತು. ಈ ನಿರ್ಣಯಕ್ಕೆ ಭಾರತ ಗೈರುಹಾಜರಾಗಿದ್ದು ಆಘಾತಕಾರಿಯಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ. .

ಗಾಝಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ನಿರ್ಧಾರಕ್ಕೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಒಪ್ಪಿಗೆ ಕೇಳಿತ್ತು.

ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ 121 ಸದಸ್ಯ ರಾಷ್ಟ್ರಗಳು ಸಮ್ಮತಿಸಿದರೆ, 14 ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದ್ದವು. ಭಾರತ ಸೇರಿ 44 ದೇಶಗಳು ಈ ನಿರ್ಣಯದಿಂದ ತಟಸ್ಥವಾಗಿದ್ದವು.

Join Whatsapp
Exit mobile version