Home ಟಾಪ್ ಸುದ್ದಿಗಳು ‘INC ಎಂದರೆ ಐ ನೀಡ್ ಕಮಿಷನ್’: ಕಾಂಗ್ರೆಸ್ಸನ್ನು ಲೇವಡಿ ಮಾಡಿದ ಸಂಬೀತ್ ಪಾತ್ರ

‘INC ಎಂದರೆ ಐ ನೀಡ್ ಕಮಿಷನ್’: ಕಾಂಗ್ರೆಸ್ಸನ್ನು ಲೇವಡಿ ಮಾಡಿದ ಸಂಬೀತ್ ಪಾತ್ರ

ಹೊಸದಿಲ್ಲಿ: ರಫೇಲ್ ವಿಚಾರವಾಗಿ ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬದಲಿಗೆ INC ಅನ್ನು ‘ಐ ನೀಡ್ ಕಮೀಷನ್’ ಎಂದು ಬದಲಾಯಿಸಬೇಕು ಎಂದು ಪಾತ್ರ ಹೇಳಿದ್ದಾರೆ. ಮಂಗಳವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ರಫೇಲ್ ಹಗರಣವು 2007-2012 ರ ನಡುವೆ ನಡೆದಿದೆ. ಅದನ್ನು ಬಿಜೆಪಿಯ ತಲೆಗೆ ಕಟ್ಟಲು ಎಲ್ಲರೂ ಯತ್ನಿಸುತ್ತಿದ್ದಾರೆ ಎಂದರು.

ಭಾರತೀಯ ವಾಯುಪಡೆಗೆ ರಫೇಲ್ ವಿಮಾನಗಳ ಅಗತ್ಯವಿತ್ತು, ಆದರೆ ಒಪ್ಪಂದವನ್ನು 10 ವರ್ಷಗಳವರೆಗೆ ಅಂತಿಮಗೊಳಿಸಲಾಗಿಲ್ಲ. ಮಾತುಕತೆಯ ಮೂಲಕ ಯಾವುದೇ ತೀರ್ಮಾನಕ್ಕೆ ಬರಲಿಲ್ಲ ಎಂದ ಅವರು, ಕಾಂಗ್ರೆಸ್ ಈಗ ದ್ವಂದ್ವ ನೀತಿ ತೋರಿಸುತ್ತಿದೆ ಎಂದು ಆರೋಪಿಸಿದರು.

Join Whatsapp
Exit mobile version