Home ಟಾಪ್ ಸುದ್ದಿಗಳು ವಿಧಾನಸಭೆ ಚುನಾವಣೆ ಹಿನ್ನೆಲೆ; ಕಾಂಗ್ರೆಸ್ ಟಿಕೆಟ್ ಅರ್ಜಿಯಿಂದ ದಾಖಲೆ ಹಣ ಸಂಗ್ರಹ

ವಿಧಾನಸಭೆ ಚುನಾವಣೆ ಹಿನ್ನೆಲೆ; ಕಾಂಗ್ರೆಸ್ ಟಿಕೆಟ್ ಅರ್ಜಿಯಿಂದ ದಾಖಲೆ ಹಣ ಸಂಗ್ರಹ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, 21.19 ಕೋಟಿ ಮೊತ್ತದ ಹಣ ಸಂಗ್ರಹ ಮಾಡುವ ಮೂಲಕ ಇನ್ನಿತರ ರಾಜಕೀಯ ಪಕ್ಷಗಳ ಹುಬ್ಬೇರಿಸಿದೆ.


ಕೆಪಿಸಿಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಒಟ್ಟು 1311 ಮಂದಿ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಪಡೆದಿದ್ದು, ಆ ಪೈಕಿ 1230 ಅರ್ಜಿಗಳು ಸ್ವೀಕಾರವಾಗಿವೆ. ಇದರಲ್ಲಿ ಸಾಮಾನ್ಯ ವರ್ಗದ 889 ಅರ್ಜಿಗಳು, ಎಸ್ ಟಿ ಎಸ್ ಸಿ ವರ್ಗದಿಂದ 341 ಅರ್ಜಿಗಳನ್ನು ಭರ್ತಿ ಮಾಡಿ, ಡಿಡಿ ಪಡೆದು ಸಲ್ಲಿಸಲಾಗಿದ್ದು, 2023ರ ಚುನಾವಣೆಗಾಗಿ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಮಾರಾಟ ಮತ್ತು ಸ್ವೀಕಾರ ಮಾಡುವಲ್ಲಿ ದಾಖಲೆ ಮಾಡಿದೆ.


ಅರ್ಜಿ ಪಡೆದುಕೊಂಡು ಭರ್ತಿ ಮಾಡಿ ಹಿಂದಿರಿಗಿಸದೇ ಇರುವ 81 ಆಕಾಂಕ್ಷಿಗಳಿಗೆ ಸಮಾಯಾವಕಾಶ ನೀಡಲಾಗಿದೆ. 81 ಜನರು ಅರ್ಜಿ ಸಲ್ಲಿಸಿ ಠೇವಣಿ ಹಣ ಸಂದಾಯ ಮಾಡಿದರೆ ಇನ್ನು 1.6 ಕೋಟಿ ರೂಪಾಯಿ ಸಂಗ್ರಹವಾಗುವ ಸಾಧ್ಯತೆ ಇದೆ.


ಆಕಾಂಕ್ಷಿತ ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಕೆಪಿಸಿಸಿಯ ನೂತನ ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.


ಸಾಮಾನ್ಯ ಆಕಾಂಕ್ಷಿಗಳಿಗೆ 2 ಲಕ್ಷ ಎಸ್ ಸಿ ಎಸ್ ಟಿ 1ಲಕ್ಷ ಮೊತ್ತ ಸಾಮಾನ್ಯ ವರ್ಗದ ಆಕಾಂಕ್ಷಿ ಅಭ್ಯರ್ಥಿಗಳು ಅರ್ಜಿ ಮೊತ್ತ 5 ಸಾವಿರದ ಜೊತೆಗೆ ಎರಡು ಲಕ್ಷದ ಡಿಡಿ ಸಲ್ಲಿಕೆ ಮಾಡಬೇಕು. ಅದೇ ರೀತಿಯಲ್ಲಿ ಎಸ್ ಸಿ ಎಸ್ ಟಿ ಸಮುದಾಯದ ಆಕಾಂಕ್ಷಿಗಳಿಗೆ ಒಂದು ಲಕ್ಷ ರೂಪಾಯಿ ನಿಗದಿ ಪಡಿಸಲಾಗಿತ್ತು. ಈ ಮೂಲಕ ಸಾಮಾನ್ಯ ವರ್ಗದ ಆಕಾಂಕ್ಷಿಗಳಿಂದ 17.78 ಕೋಟಿ ಹಾಗೂ ಆಕಾಂಕ್ಷಿಗಳಿಂದ 3.41 ಕೋಟಿ ಮೊತ್ತ ಸಂಗ್ರಹವಾಗಿದೆ ಎಂದು ಕೆಪಿಸಿಸಿ ಮೂಲಗಳ ದೃಢಪಡಿಸಿವೆ.

Join Whatsapp
Exit mobile version