Home ಟಾಪ್ ಸುದ್ದಿಗಳು ಪೊಲೀಸ್ ಭದ್ರತೆಯಲ್ಲಿ ಕುದುರೆಯೇರಿ ಬಂದ ದಲಿತ ಮದುಮಗ

ಪೊಲೀಸ್ ಭದ್ರತೆಯಲ್ಲಿ ಕುದುರೆಯೇರಿ ಬಂದ ದಲಿತ ಮದುಮಗ

ಕೋಟಾ: ಮೇಲ್ಜಾತಿಯವರ ಬೆದರಿಕೆ ಹಿನ್ನೆಲೆಯಲ್ಲಿ ದಲಿತ ಮಗುಮಗನೊಬ್ಬ ಪೊಲೀಸ್ ಭದ್ರತೆಯಲ್ಲಿ ಕುದುರೆ ಏರಿ ಕಲ್ಯಾಣ ಮಂಟಪಕ್ಕೆ ಬಂದ ಘಟನೆ ನಡೆದಿದೆ.

ರಾಜಸ್ತಾನದ ಬುಂದಿ ಜಿಲ್ಲೆಯಲ್ಲಿ ಚಾದಿ ಗ್ರಾಮದ 27 ವರ್ಷ ಪ್ರಾಯದ ಮದುಮಗ ಶ್ರೀರಾಂ ಮೇಘ್ ವಾಲ್ ಬಿಳಿಯ ಶೇರ್ವಾನಿ, ಬಲ ಭಾಗದಲ್ಲಿ ನೇತಾಡುವ ಖಡ್ಗ ಹಿಡಿದು ನಗು ಸೂಸುತ್ತ ಕುದುರೆಯೇರಿ ಮದುವೆ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದರು.

ದಲಿತರು ಈ ರೀತಿ ಬರಲು ಮೇಲ್ಜಾತಿಯವರು ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.
ಮೇಘ್ ವಾಲ್ ಪ್ರಕಾರ, ಈ ಭಾಗದಲ್ಲಿ ದಲಿತ ಮದುಮಗ ಹೀಗೆ ಬಂದುದು ಇದೇ ಮೊದಲು. ಅದಕ್ಕೆ ಸಂಬಂಧಿಸಿದವರು ಸಾಕಷ್ಟು ಪೊಲೀಸ್ ಬೆಂಗಾವಲು ಒದಗಿಸಿದ್ದರು. ಅವರಿಗೆಲ್ಲ ಧನ್ಯವಾದ ಎಂದೂ ಅವರು ಹೇಳಿದರು.

ಜೈಭೀಮ್ ಘೋಷಣೆಯೊಂದಿಗೆ ಡಿಜೆ ಸಂಗೀತ ಉದ್ದಕ್ಕೂ ಹಿಂದಿ ಗೀತೆಗಳೊಂದಿಗೆ ಮೆರವಣಿಗೆ ಜೊತೆ ಊರಿನ ಉದ್ದಗಲಕ್ಕೂ ಮೇಳವಿಸಿತು. ಪಂಚಾಯತಿಯಲ್ಲಿ ಗುತ್ತಿಗೆ ನೌಕರ ಆಗಿರುವ ಮೇಘ್ ವಾಲ್ ಹೇಳುತ್ತಾರೆ ಇದು ಸಮಾನತೆಯತ್ತ ಇನ್ನೊಂದು ಹೆಜ್ಜೆ.
ಬುಂದಿ ಜಿಲ್ಲಾ ಪೊಲೀಸರು ಈ ಮದುವೆಯ ಭದ್ರತೆಯ ಉಸ್ತುವಾರಿ ಹೊತ್ತಿದ್ದರು.

Join Whatsapp
Exit mobile version