Home ಟಾಪ್ ಸುದ್ದಿಗಳು ಪಾಕ್ ಚುನಾವಣೆ ಕುರಿತು ಯುರೋಪಿಯನ್ ಯೂನಿಯನ್‍ ವರದಿ ಬಹಿರಂಗಕ್ಕೆ ಆಗ್ರಹಿಸಿದ ಇಮ್ರಾನ್‍ ಖಾನ್ ಪಕ್ಷ

ಪಾಕ್ ಚುನಾವಣೆ ಕುರಿತು ಯುರೋಪಿಯನ್ ಯೂನಿಯನ್‍ ವರದಿ ಬಹಿರಂಗಕ್ಕೆ ಆಗ್ರಹಿಸಿದ ಇಮ್ರಾನ್‍ ಖಾನ್ ಪಕ್ಷ

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆ ಕುರಿತು ಯುರೋಪಿಯನ್ ಯೂನಿಯನ್‍ನ ವರದಿಯನ್ನು ಕೂಡಲೇ ಬಹಿರಂಗಗೊಳಿಸಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಆಗ್ರಹಿಸಿದೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ರವೂಫ್ ಹಸನ್, ಇದು ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ವರದಿಯಾಗಿರುವುದರಿಂದ ಅದನ್ನು ತಕ್ಷಣ ಸಾರ್ವಜನಿಕರಿಗಾಗಿ ಬಿಡುಗಡೆಗೊಳಿಸಬೇಕು ಆಗ್ರಹಿಸಿದ್ದಾರೆ.

ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವು ರಾಜಕೀಯ ಪ್ರಮುಖರ ಸ್ಪರ್ಧೆಯನ್ನು ನಿರ್ಬಂಧ, ಸಭೆ ಸೇರುವ ಸ್ವಾತಂತ್ರ್ಯ ನಿರಾಕರಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧ, ಇಂಟರ್‍‌ನೆಟ್ ಬಳಕೆಗೆ ನಿರ್ಬಂಧ, ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪಗಳ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ ಎಂದು ಯುರೋಪಿಯನ್ ಯೂನಿಯನ್‍ನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯ ವಕ್ತಾರ ಪೀಟರ್ ಸ್ಟ್ಯಾನೊ ಪ್ರತಿಕ್ರಿಯಿಸಿದ್ದರು.

Join Whatsapp
Exit mobile version