Home ಟಾಪ್ ಸುದ್ದಿಗಳು ಬಿಜೆಪಿಯಿಂದ ಸಂವಿಧಾನ ಬದಲಾವಣೆ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ದೂರು

ಬಿಜೆಪಿಯಿಂದ ಸಂವಿಧಾನ ಬದಲಾವಣೆ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ದೂರು

ಮುಂಬೈ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡುತ್ತಿರುವ ಹೇಳಿಕೆ ವಿರುದ್ಧ ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠಾವಳೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದಾರೆ.


ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತದೆ ಎಂದು ರಾಹುಲ್ ಗಾಂಧಿ ಪದೇ ಪದೇ ಹೇಳುತ್ತಿದ್ದಾರೆ. ಈ ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಅಲ್ಲಗಳೆದಿದ್ದಾರೆ. ಹಾಗಾಗಿ, ಇಂತಹ ಹೇಳಿಕೆ ನೀಡದಂತೆ ಅವರ ಮೇಲೆ ನಿರ್ಬಂಧ ಹೇರುವಂತೆ ದೂರು ನೀಡಿದ್ದೇನೆಎಂದು ಅಠಾವಳೆ ಹೇಳಿದ್ದಾರೆ.

Join Whatsapp
Exit mobile version