Home ಕರಾವಳಿ ಬಂಟ್ವಾಳದಲ್ಲಿ ವಿದ್ಯಾರ್ಥಿ ಸಹಿತ ಇಬ್ಬರಿಗೆ ಸಾವಿಗೆ ಕಾರಣವಾದ ಅಕ್ರಮ ಕಲ್ಲಿನ ಕೋರೆ : SDPIಯಿಂದ...

ಬಂಟ್ವಾಳದಲ್ಲಿ ವಿದ್ಯಾರ್ಥಿ ಸಹಿತ ಇಬ್ಬರಿಗೆ ಸಾವಿಗೆ ಕಾರಣವಾದ ಅಕ್ರಮ ಕಲ್ಲಿನ ಕೋರೆ : SDPIಯಿಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಬಂಟ್ವಾಳ: ವಿಧಾನಸಭಾ ಕ್ಷೇತ್ರದ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಕಲ್ಲಿನ ಕೋರೆ ಕಾರ್ಯಾಚರಿಸುತ್ತಿದ್ದು, ಸ್ಥಳೀಯ ನಾಗರಿಕರ ತೀವ್ರ ಆಕ್ಷೇಪ ಇದ್ದರು ರಾಜಾರೋಷವಾಗಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಗಣಿ ಇಲಾಖೆ ಮತ್ತು ತಹಶೀಲ್ದಾರ್ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.

ಆದರೆ ಇಂದು ದುರ್ದೈವಶಾತ್ ಸ್ಥಳೀಯ ಲಾರಿ ಚಾಲಕ ಜಗದೀಶ್ ಮತ್ತು ಹದಿನೇಳು ವರ್ಷದ ವಿದ್ಯಾರ್ಥಿ ನಿದೀಶ್ ಸ್ನಾನಕ್ಕೆ ಇಲಿದಿದ್ದು, ಆ ವೇಳೆ ಹೊಂಡ ಇರುವುದು ತಿಳಿಯದೆ ಮೃತಪಟ್ಟಿದ್ದಾರೆ.

ಇಂತಹಾ ಅವೈಜ್ಞಾನಿಕ ಮತ್ತು ಅಕ್ರಮವಾಗಿ ಕೆಂಪು ಕಲ್ಲು, ಕಪ್ಪು ಕಲ್ಲು, ಹೊಯ್ಗೆ ಇನ್ನಿತರ ಗಣಿಗಾರಿಕೆ ಬಂಟ್ವಾಳ ತಾಲೂಕಿನಾದ್ಯಂತ ನಡೆಯುತ್ತಿದ್ದು, ಈ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಿದೆ ಮತ್ತು ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಬೇಕೆಂದು ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಮುನೀಶ್ ಆಲಿ ಬಂಟ್ವಾಳ ಎಚ್ಚರಿಸಿದ್ದಾರೆ.

Join Whatsapp
Exit mobile version