Home ಕರಾವಳಿ ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಮತ್ತೊಂದೆಡೆ ಬಹಿರಂಗವಾದ ಅಕ್ರಮ ಮತದಾರರ ಪಟ್ಟಿ!

ಕೋಟೆಕಾರು ಪಟ್ಟಣ ಪಂಚಾಯತ್ ನಲ್ಲಿ ಮತ್ತೊಂದೆಡೆ ಬಹಿರಂಗವಾದ ಅಕ್ರಮ ಮತದಾರರ ಪಟ್ಟಿ!

►12 ನೇ ವಾರ್ಡ್ ಜಲಾಲ್ ಭಾಗ್’ನಲ್ಲಿ 80ಕ್ಕೂ ಹೆಚ್ಚು ಅನಧಿಕೃತ ಮತದಾರರು!

►ಮನೆ ನಂಬ್ರ 5/148-12ರಲ್ಲಿ ಶರೋನ್ ಮಾಥ್ಯೂ, ರಿತಿಕಾ ಹೆಗ್ಡೆ, ಆಯಿಷಾ ಮತದಾರರಂತೆ !

ಉಳ್ಳಾಲ: ಕೋಟೆಕಾರ್ ಪಟ್ಟಣ ಪಂಚಾಯತ್ ನಲ್ಲಿ ಮತ್ತೊಂದೆಡೆ ಅಕ್ರಮ ಮತದಾರರ ಪಟ್ಟಿ ಬಹಿರಂಗವಾಗಿದೆ. 12ನೇ ವಾರ್ಡ್ ಜಲಾಲ್ ಭಾಗ್ ನಲ್ಲಿ ಸುಮಾರು 80 ಕ್ಕೂ ಅಧಿಕ ಅನಧಿಕೃತ ಹೆಸರುಗಳು ಮತದಾರರ ಪಟ್ಟಿಯಲ್ಲಿ ನಮೂದಿಸಲಾಗಿದೆ.


ಒಂದೇ ಡೋರ್ ನಂಬರಿನಲ್ಲಿ ವಿವಿಧ ಧರ್ಮದ ನಲವತ್ತಕ್ಕೂ ಹೆಚ್ಚು ಮತದಾರರ ಹೆಸರು ನಮೂದಿಸಲಾಗಿದೆ. ಉದಾಹರಣೆಗೆ ಮನೆ ನಂಬ್ರ 5/148-12ರಲ್ಲಿ ಶರೋನ್ ಮಾಥ್ಯೂ, ರಿತಿಕಾ ಹೆಗ್ಡೆ, ಆಯಿಷಾ ಎಂಬ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮತದಾರರ ಗುರುತಿನ ಚೀಟಿಯ ಸೀರಿಯಲ್ ನಂಬರ್ ಕೂಡ ಒಂದೇ ರೀತಿಯ ಸಾಮ್ಯತೆಯನ್ನು ಹೊಂದಿದೆ. ಮತದಾರರಂತೆ ರಾಜಕೀಯ ನಾಯಕನ ಕೈಯಲ್ಲಿ 40ಕ್ಕೂ ಹೆಚ್ಚು ಮತದಾರರ ಚೀಟಿ ಕಂಡುಬಂದಿದ್ದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.






ಮಾಜಿ ಸದಸ್ಯರೊಬ್ಬರು ಸುಲಭವಾಗಿ ಗೆಲ್ಲಲು ಮಾಡಿದ ಷಡ್ಯಂತ್ರವಾಗಿದ್ದು, ಅನಧಿಕೃತ ಹೆಸರುಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Join Whatsapp
Exit mobile version