Home ಟಾಪ್ ಸುದ್ದಿಗಳು ಮುಸ್ಲಿಮರ ನರಮೇಧಕ್ಕೆ ಕರೆ| ಇನ್ನಿಬ್ಬರ ವಿರುದ್ಧ FIR ದಾಖಲು

ಮುಸ್ಲಿಮರ ನರಮೇಧಕ್ಕೆ ಕರೆ| ಇನ್ನಿಬ್ಬರ ವಿರುದ್ಧ FIR ದಾಖಲು

ಹೊಸದಿಲ್ಲಿ: ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದ್ದ ಇನ್ನಿಬ್ಬರ ಹೆಸರನ್ನು FIR ನಲ್ಲಿ ಸೇರಿಸಲಾಗಿದೆ.

ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಕರೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ FIRನಲ್ಲಿ ಇನ್ನೂ ಇಬ್ಬರನ್ನು ಹೆಸರಿಸಲಾಗಿದೆ ಎಂದು ಹರಿದ್ವಾರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿಟಿ ಶೇಖರ್ ಸುಯಲ್ ತಿಳಿಸಿದ್ದಾರೆ.

ದ್ವೇಷ ಭಾಷಣ ಮಾಡಿದ್ದ ಧರ್ಮ ದಾಸ್ ಮತ್ತು ಅನ್ನಪೂರ್ಣ ಎಂಬ ಇಬ್ಬರು ಮಹಿಳೆಯರನ್ನು FIR ನಲ್ಲಿ ಹೆಸರಿಸಲಾಗಿದೆ.

ಹರಿದ್ವಾರದಲ್ಲಿ ಡಿಸೆಂಬರ್ 17 ಮತ್ತು 19 ರ ನಡುವೆ ಮೂರು ದಿನಗಳ ಕಾಲ ನಡೆದ ’ಧರ್ಮ ಸಂಸದ್‌’ ನಲ್ಲಿ ಮುಸ್ಲಿಮರ ವಿರುದ್ಧ ಬಹಿರಂಗ ಹಿಂಸಾಚಾರಕ್ಕೆ ಕರೆ ನೀಡಿರುವುದು ಮತ್ತು ದೇಶದ ನಾಯಕರು ಈ ಬಗ್ಗೆ ಮೌನ ವಹಿಸಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು.

Join Whatsapp
Exit mobile version