ಕಿನ್ನಿಗೋಳಿ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಂಗಳೂರಿನ ಯೇನೆಪೋಯ ಪಿಯು ಕಾಲೇಜು ಇದರ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಬೂಬಕ್ಕರ್ ರಿಹಾನ್ ಅವರು 525 (ಶೇಕಡಾ 87.50) ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಿನ್ನಿಗೋಳಿಯ ಮೊಹಮ್ಮದ್ ರಫೀಕ್ ಹಾಗೂ ಫೌಝಿಯಾ ದಂಪತಿ ಪುತ್ರನಾಗಿದ್ದಾರೆ. ಇಂಗ್ಲೀಷ್ 85, ಹಿಂದಿ 95, ಭೌತಶಾಸ್ತ್ರ 90, ರಸಾಯನ ಶಾಸ್ತ್ರ 82, ಗಣಿತ 86, ಜೀವಶಾಸ್ತ 87 ಅಂಕ ಗಳಿಸಿದ್ದಾರೆ.