Home ಟಾಪ್ ಸುದ್ದಿಗಳು ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಹೋದರೆ ಅಲ್ಲಿಯೂ ನಮಗೆ ಜಯ: ಉಡುಪಿ ಶಾಸಕ ರಘುಪತಿ ಭಟ್

ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಹೋದರೆ ಅಲ್ಲಿಯೂ ನಮಗೆ ಜಯ: ಉಡುಪಿ ಶಾಸಕ ರಘುಪತಿ ಭಟ್

ಬೆಂಗಳೂರು: ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ಇಂದು ತೀರ್ಪು ನೀಡಿದ್ದು , ತೀರ್ಪಿನ ವಿರುದ್ದ ಅರ್ಜಿದಾರರು ಸುಪ್ರೀಂ ಕೋರ್ಟ್ ಗೆ ಹೋದರೆ ಅಲ್ಲಿಯೂ ನಮಗೆ ಜಯ ಸಿಗುವ ನಂಬಿಕೆ ಇದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಹಿಜಾಬ್ ವಿರುದ್ಧ ಪ್ರತಿಭಟಿಸುತ್ತಿದ್ದ ಆರು ವಿದ್ಯಾರ್ಥಿನಿಯರು ಹಠ ಬಿಟ್ಟು ಕಾಲೇಜಿಗೆ ಬರಬೇಕು, ಇಷ್ಟು ದಿನ ಕಾಲೇಜಿಗೆ ಬರದೆ ಸಮಸ್ಯೆಯಾಗಿದೆ, ಅಂತಹವರಿಗೆ ಪ್ರತ್ಯೇಕ ನೋಟ್ಸ್ ಕೂಡ ನೀಡುತ್ತೇವೆ ಎಂದಿದ್ದಾರೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ತಿರ್ಪನ್ನು ನೀಡಿದೆ. ಸಮವಸ್ತ್ರ ಇಲ್ಲದ ಶಾಲೆಗಳಲ್ಲಿ ಹಿಜಾಬ್ ಧರಿಸಿದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

ಆರು ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಭಯಗೊಳ್ಳುವುದು ಬೇಡ. ವಿದ್ಯಾರ್ಥಿನಿಯರಿಗೆ ಯಾರಿಂದಲೂ ಸಮಸ್ಯೆಯಾಗುವುದಿಲ್ಲ, ವಿದ್ಯಾರ್ಥಿನಿಯರೊಂದಿಗೆ ನಾನು ಮಾತನಾಡುತ್ತೇನೆ ಎಂದು ಹೇಳಿದರು.

Join Whatsapp
Exit mobile version