Home ಟಾಪ್ ಸುದ್ದಿಗಳು ಭರತ್ ಶೆಟ್ಟಿಗೆ ತಾಕತ್ತಿದ್ದರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನನ್ನು ಮುಟ್ಟಿ ನೋಡಲಿ: ರಮಾನಾಥ ರೈ ಸವಾಲು

ಭರತ್ ಶೆಟ್ಟಿಗೆ ತಾಕತ್ತಿದ್ದರೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನನ್ನು ಮುಟ್ಟಿ ನೋಡಲಿ: ರಮಾನಾಥ ರೈ ಸವಾಲು

►ಭರತ್ ಶೆಟ್ಟಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಮಾಜಿ‌ ಸಚಿವ

ಮಂಗಳೂರು : ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ತಾಕತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಅದರ ಪರಿಣಾಮ ಏನಾಗಲಿದೆ ಎಂದು ನಾವು ತೋರಿಸುತ್ತೇವೆ ಎಂದು ಮಾಜಿ‌ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಸವಾಲು ಹಾಕಿದ್ದಾರೆ.

ರಾಹುಲ್ ಗಾಂಧಿಯ ಕಪಾಳಕ್ಕೆ ಹೊಡೆಯಬೇಕು ಎಂಬ ಭರತ್ ಶೆಟ್ಟಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಭರತ್ ಶೆಟ್ಟಿ ಗಂಡುಮಗನಾಗಿದ್ದರೆ, ಅವನ ಪಟಾಲಂಗೆ ತಾಕತ್ತಿದ್ದರೆ ನಮ್ಮ ಒಬ್ಬ ಕಾರ್ಯಕರ್ತನ ಮೇಲೆ ಕೈಮಾಡಿ ನೋಡಲಿ, ನಾವು ಕೈಗೆ ಬಳೆ ಹಾಕಿ ಕೂತಿಲ್ಲ ಎಂದು ತಿರುಗೇಟು ನೀಡಿದರು.

ರಾಹುಲ್ ಗಾಂಧಿಯ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಭರತ್ ಶೆಟ್ಟಿ ವಿರುದ್ಧ ಏಕವಚನದಲ್ಲೇ ವಗ್ದಾಳಿ ನಡೆಸಿರುವ ಅವರು, ಭರತ್ ಶೆಟ್ಟಿ ಶಾಸಕನಾಗಲು ನಾಲಾಯಕ್, ಅವನು ಯೋಗ್ಯತೆ ಇಲ್ಲದ ಮನುಷ್ಯ, ಒಂದು‌ ಸಮಯದಲ್ಲಿ‌ ಅವನು ವಚನಭ್ರಷ್ಟ ಜೆಡಿಎಸ್‌ನಲ್ಲಿದ್ದ, ಅಮರನಾಥ ಶೆಟ್ಟಿಯ ಕೃಪೆಯಲ್ಲಿದ್ದ, ಕೊನೆಗೆ ಅವರಿಗೂ ಕೈ ಕೊಟ್ಟಿದ್ದಾನೆ ಎಂದು ಕಿಡಿಕಾರಿದರು.

ನಮಗೂ ಸಂಯಮ‌‌ ಇದೆ, ನಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಸೋತಿರಬಹುದು, ಆದರೆ ನಾವು ಸತ್ತಿಲ್ಲ, ಭರತ್ ಶೆಟ್ಟಿಯ ಮಾತುಗಳನ್ನು ಸಹಿಸಿಕೊಳ್ಳಲು‌ ಸಾಧ್ಯವಿಲ್ಲ ಎಂದರು.

ಭರತ್ ಶೆಟ್ಟಿ ದೊಡ್ಡ ವ್ಯಕ್ತಿಯೇನಲ್ಲ, ಹಿಂಸೆಗೆ ಪ್ರಚೋದನೆ ಮಾಡಿರುವ ಭರತ್ ಶೆಟ್ಟಿ ಮೇಲೆ ಪೊಲೀಸರು ಸುಮೊಟೊ‌ ಕೇಸ್ ದಾಖಲಿಸಿ‌ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಯವರು ಕಾಂಗ್ರೆಸ್‌ನಲ್ಲಿರುವ ಹಿಂದೂಗಳನ್ನು ಹಿಂದೂಗಳೇ‌ ಅಲ್ಲ ಎನ್ನುತ್ತಾರೆ, ‌ನಮ್ಮ‌ ಹುಟ್ಟನ್ನೇ ಅಪಮಾನ ಮಾಡುತ್ತಾರೆ, ಆದರೆ ಬಿಜೆಪಿಯವರು ಯಾರಿಗೆ ಹುಟ್ಟಿದ್ದು ಎಂದು ನಾವು ಅಪಮಾನ ಮಾಡುವ ಕೆಲಸ ಮಾಡಲ್ಲ‌ ಎಂದರು

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಎಂ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಹರೀನಾಥ್ ಕೆ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಅಧ್ಯಕ್ಷರು ಗಳು ಪ್ರಕಾಶ್ ಸಾಲಿಯಾನ್, ಸುರೇಂದ್ರ ಕಾಂಬ್ಳಿ, ಜೆ ಅಬ್ದುಲ್ ಸಲೀಂ, ಬೇಬಿ ಕುಂದರ್, ನವೀನ್ ಡಿ ಸೋಜಾ, ಅಪ್ಪಿಲತಾ, ಬೊಂಡಲ ಚಿತ್ತಾರಂಜನ್ ಶೆಟ್ಟಿ, ರಮಾನಂದ ಪೂಜಾರಿ, ಶುಭೋದಯ ಆಳ್ವಾ, ಸೌಹಾನ್ ಎಸ್ ಕೆ ಉಪಸ್ಥಿತರಿದ್ದರು.

Join Whatsapp
Exit mobile version