Home ಟಾಪ್ ಸುದ್ದಿಗಳು 7 ಸೆಕೆಂಡ್’ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕಾರ ಮಾಡಿದ ಐಎಎಸ್ ಅಧಿಕಾರಿ!

7 ಸೆಕೆಂಡ್’ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕಾರ ಮಾಡಿದ ಐಎಎಸ್ ಅಧಿಕಾರಿ!

ಜೈಪುರ: ಬಿಜೆಪಿ ನಾಯಕ ಸತೀಶ್ ಪೂನಿಯಾ ಬರುತ್ತಿದ್ದಂತೆ ಅವರನ್ನು ಸ್ವಾಗತಿಸಲು ನಿಂತಿದ್ದ ಐಎಎಸ್ ಅಧಿಕಾರಿ ಟೀನಾ ದಾಬಿ 7 ಸೆಕೆಂಡ್ ಗಳಲ್ಲಿ ಅವರ ಮುಂದೆ 5 ಬಾರಿ ನಮಸ್ಕಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.


ಆದರೆ, ಆಕೆಯತ್ತ ಗಮನ ಹರಿಸದ ಬಿಜೆಪಿ ನಾಯಕ ತನ್ನ ಮೊಬೈಲ್ ನಲ್ಲಿ ಮುಳುಗಿ ಹೋಗಿರುವುದನ್ನು ಕಾಣಬಹುದು.


ಪ್ರಸ್ತುತ ಬಾರ್ಮರ್ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ರಾಜಸ್ಥಾನದ ಬಿಜೆಪಿ ನಾಯಕ ಸತೀಶ್ ಪೂನಿಯಾ ಅವರ ಮುಂದೆ ನಮಸ್ಕರಿಸುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ.


ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

Join Whatsapp
Exit mobile version