Home ಟಾಪ್ ಸುದ್ದಿಗಳು ಮಾಜಿ ಪತ್ನಿ ಎರಡನೇ ಮದುವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ಸಿದ್ಧರಾದ ಐಎಎಸ್ ಅಧಿಕಾರಿ

ಮಾಜಿ ಪತ್ನಿ ಎರಡನೇ ಮದುವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ಸಿದ್ಧರಾದ ಐಎಎಸ್ ಅಧಿಕಾರಿ

ಜೈಪುರ: ವಿಚ್ಚೇದನ ಪಡೆದಿದ್ದ ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಎರಡನೇ ವಿವಾಹವಾದ ಬೆನ್ನಲ್ಲೇ ಅವರ ಮಾಜಿ ಪತಿ ಹಾಗೂ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಕೂಡ ಎರಡನೇ ಮದುವೆಗೆ ರೆಡಿಯಾಗಿದ್ದಾರೆ.

ಅಥರ್ ಖಾನ್ ಅವರು ಮರು ವಿವಾಹದ ಸುದ್ದಿಯನ್ನು ಇನ್ ಸ್ಟಾಗ್ರಾಂನಲ್ಲಿ ಭಾವಿ ಪತ್ನಿಯ ಫೋಟೋ ಶೇರ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಈಗಾಗಲೇ ನಿಶ್ಚಿತಾರ್ಥ ನೆರವೇರಿದೆ. ಅಥರ್ ಅವರು ಡಾ. ಮೆಹ್ರೀನ್ ಖಾಜಿ ಎಂಬುವರನ್ನು ವರಿಸಲಿದ್ದಾರೆ. ಮೆಹ್ರಿನ್ ಅವರು ಕೂಡ ಅಥರ್ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

2015ರ ಬ್ಯಾಚ್ ನ ಐಎಎಸ್ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್ ಖಾನ್ ಅವರು ಎರಡನೇ ಶ್ರೇಣಿ ಪಡೆದಿದ್ದರು. ತರಬೇತಿ ಸಮಯದಲ್ಲೇ ಇಬ್ಬರ ನಡುವೆ ಪ್ರೀತಿಯಾಗಿ, 2018ರ ಏಪ್ರಿಲ್ 7ರಂದು ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್ ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಎಲ್ಲವೂ ಉತ್ತಮವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಯಿತು. ಮದುವೆಯಾದ ಎರಡು ವರ್ಷಗಳ ಬಳಿಕ 2020ರ ನವೆಂಬರ್ ತಿಂಗಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. 2021ರ ಆಗಸ್ಟ್ ತಿಂಗಳಲ್ಲಿ ದಂಪತಿಯ ಡಿವೋರ್ಸ್ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿತ್ತು.

ಡಿವೋರ್ಸ್ ಪಡೆದ ಬೆನ್ನಲ್ಲೇ ಟೀನಾ ಡಾಬಿ ಅವರು ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ಏಪ್ರಿಲ್ 22ರಂದು ಜೈಪುರದಲ್ಲಿ ಮದುವೆಯಾದ್ದರು.

Join Whatsapp
Exit mobile version