ಬೆಂಗಳೂರು: ನಟಿ ರಮ್ಯಾ ಅವರು ಸಿಹಿ ಸುದ್ದಿ ಕೊಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ‘ನಾಳೆ (ಆಗಸ್ಟ್ 31) ಬೆಳಗ್ಗೆ 11.15ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.
ಈ ವಿಚಾರದ ಕುರಿತು ಅಭಿಮಾನಿಗಳ ತಲೆಯಲ್ಲಿ ಹಲವು ಪ್ರಶ್ನೆ ಮೂಡಿದೆ. ರಮ್ಯಾ ಹೊಸ ಸಿನಿಮಾ ಮಡ್ತಾರಾ? ಮದುವೆ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಂಡಿದ್ದಾರಾ? ನಿರ್ಮಾಣ ಸಂಸ್ಥೆ ಶುರು ಮಾಡುತ್ತಾರಾ? ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.