ನವದೆಹಲಿ: ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪ್ರಕರಣಗಳ ಕುರಿತಂತೆ ವಾದ ಮಂಡಿಸುವಾಗ ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್ಶಿಪ್’ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಕುತೂಹಲದ ಘಟನೆ ನಡೆಯಿತು.
‘ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ನೀವು ಇದನ್ನು ಹೇಳುವುದನ್ನು ನಿಲ್ಲಿಸಿದರೆ, ನನ್ನ ಸಂಬಳದಲ್ಲಿ ಅರ್ಧದಷ್ಟು ನೀಡುತ್ತೇನೆ,” ಎಂದು ಹಿರಿಯ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರ ಪೀಠದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ವಕೀಲರಿಗೆ ಹೇಳಿದರು. ನ್ಯಾ.ನರಸಿಂಹ ಅವರು, “ಸರ್ ಎಂದು ಏಕೆ ಬಳಸಬಾರದು?, ಇಲ್ಲದಿದ್ದರೆ ಹಿರಿಯ ವಕೀಲರು ಮೈ ಲಾರ್ಡ್ಸ್ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ” ಎಂದರು.