Home ಟಾಪ್ ಸುದ್ದಿಗಳು ಗೃಹ ಸಚಿವ ಪರಮೇಶ್ವರ್​ ಮುಖ್ಯಮಂತ್ರಿ ಆಗಲಿ: ಸಚಿವ ರಾಜಣ್ಣ

ಗೃಹ ಸಚಿವ ಪರಮೇಶ್ವರ್​ ಮುಖ್ಯಮಂತ್ರಿ ಆಗಲಿ: ಸಚಿವ ರಾಜಣ್ಣ

ತುಮಕೂರು: ಡಾ.ಜಿ.ಪರಮೇಶ್ವರ್​ ಮುಖ್ಯಮಂತ್ರಿ ಆಗಲಿ ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಕೆಎನ್ ರಾಜಣ್ಣ, ನನ್ನ ಜೀವಮಾನದಲ್ಲಿ ಏನು ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ನಾನು ಹೇಳಿದ ಯಾವ ವಿಚಾರವೂ ಅಸತ್ಯವಾಗಿಲ್ಲ ಎಂದು ಹೇಳಿದ್ದಾರೆ.

ಡಾ.ಪರಮೇಶ್ವರ್ ಸಿಎಂ ಆಗ್ತಾರೆ ಅನ್ನೋ ವಿಚಾರವೂ ಅಸತ್ಯವಾಗಲ್ಲ. ಸಿದ್ದರಾಮಯ್ಯ ಯಾವಾಗ ಬಿಡುತ್ತಾರೋ ಆಗ ಪರಮೇಶ್ವರ್ ಸಿಎಂ ಆಗುತ್ತಾರೆ ಎಂದರು. ಈ ಅವಧಿಯಲ್ಲೇ ಪರಮೇಶ್ವರ್ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು ಸಿಎಂ ಆಗುತ್ತಾರೆ ಎಂದರು. ನಾನು ಸಚಿವನಾಗಿರೋದೆ ಸಾಕು, ನನಗೆ ಡಿಸಿಎಂ ಹುದ್ದೆ ಬೇಡ ಎಂದು ತಿಳಿಸಿದ್ದಾರೆ.

Join Whatsapp
Exit mobile version