ಯತ್ನಾಳ್‍ ರನ್ನು ನಾನೇ ಕಾಂಗ್ರೆಸ್‍ ಗೆ ಕರೆದುಕೊಂಡು ಬರುತ್ತೇನೆ: ಶಾಸಕ ರಾಜು ಕಾಗೆ

- Advertisement -

ಹುಬ್ಬಳ್ಳಿ: ಯತ್ನಾಳ್ ಅವರು ಕಾಂಗ್ರೆಸ್‌ ಗೆ ಬಂದರೆ ಕರೆದುಕೊಳ್ಳುತ್ತೇವೆ ಎಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.

- Advertisement -

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟಿಸಿದ ಬಗ್ಗೆ ಪ್ರತಿಕ್ರಿಸಿದರು. ನಾನೇ ಯತ್ನಾಳ್‍ ರನ್ನ ಕಾಂಗ್ರೆಸ್‍ಗೆ ಕರೆದುಕೊಂಡು ಬರುತ್ತೇನೆ. ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ.

ಬೆಲೆ ಏರಿಕೆ ವಿಚಾರವಾಗಿ, ಬೆಲೆ ಏರಿಕೆ ಅಷ್ಟು ಹೊರೆ ಆಗುವುದಿಲ್ಲ. ನಮಗೂ ಇತಿ ಮಿತಿ ಇದೆ. ಹೊಸ ಬಸ್ ನಿಲ್ದಾಣದ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ವ್ಯವಸ್ಥೆಯನ್ನು ಸರಿ ಮಾಡಬೇಕು. ಲಾಭ ನಷ್ಟವಿಲ್ಲದೇ ಸಂಸ್ಥೆ ನಡೆಯಬೇಕು ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

- Advertisement -

ಕಾಂಗ್ರೆಸ್‍ ನ ಐದು ಗ್ಯಾರಂಟಿ ಜನರಿಗೆ ಉಪಯೋಗ ಆಗುತ್ತಿದೆ. ಯಾರು ವಿರೋಧ ಮಾಡುತ್ತಿದ್ದರೋ ಅವರೇ ಈಗ ನಮ್ಮನ್ನು ನಕಲು ಮಾಡುತ್ತಿದ್ದಾರೆ. ಇನ್ನೂ ಸರ್ಕಾರದಲ್ಲಿ ಅಡೆತಡೆಗಳು ಸಹಜ. ಇದೆಲ್ಲ ಮೀರಿ ಸಿಎಂ ಸಿದ್ದರಾಮಯ್ಯ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದಾರೆ ಎಂದರು.

- Advertisement -


Must Read

Related Articles