ಇತಿಹಾಸದಲ್ಲಿ ಉರಿಗೌಡ-ನಂಜೇಗೌಡರ ಬಗ್ಗೆ ನಾನು ಓದಿಲ್ಲ, ನನಗೆ ಗೊತ್ತಿರುವವರ ಬಗ್ಗೆ ಕೇಳಿದ್ರೆ ಹೇಳುತ್ತೇನೆ: ಸುಧಾಕರ್

Prasthutha|

ಚಿಕ್ಕಬಳ್ಳಾಪುರ: ಇತಿಹಾಸದಲ್ಲಿ ಉರಿಗೌಡ-ನಂಜೇಗೌಡರ ಬಗ್ಗೆ ನಾನು ಓದಿಲ್ಲ, ನನಗೆ ಗೊತ್ತಿರುವವರ ಬಗ್ಗೆ ಕೇಳಿದರೆ ಹೇಳುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೊತ್ತಿಲ್ಲದವರ ಬಗ್ಗೆ ಯಾವುದನ್ನು ಹೇಳಲಾಗುವುದಿಲ್ಲ. ಇದನ್ನು ದೊಡ್ಡ ವಿಷಯ ಮಾಡುವುದು ಬೇಡ. ಚರಿತ್ರೆಯಲ್ಲಿ ದೇಶ ಸೇವೆ ಮಾಡಿದವರಿಗೆ ಮಾನ್ಯತೆ ಕೊಡೋಣ, ಗೌರವ ಸೂಚಿಸೋಣ. ಗೊತ್ತಿಲ್ಲದವರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.


ಕೋಲಾರ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೆ ಸರಿಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ವರುಣಾಗೆ ಹೊಗ್ತಾರೆ ಅಂತ ನಾನು ಮೊದಲೇ ಹೇಳಿದ್ದೆ. ಕೋಲಾರಕ್ಕೆ ಬೇಡವೆಂದು ರಾಹುಲ್ ಗಾಂಧಿ ಹೇಳಿರಲಿಲ್ಲ. ಕೋಲಾರದಿಂದ ಏನೋ ಮಾಹಿತಿ ಬಂದಿರುತ್ತದೆ. ಸಿದ್ದರಾಮಯ್ಯ ವರುಣಾಗೆ ಹೊದರೆ ಅವರಿಗೆ ಒಳ್ಳೆಯದು ಆಗುತ್ತದೆ ಎಂದರು.

Join Whatsapp
Exit mobile version