Home ಟಾಪ್ ಸುದ್ದಿಗಳು ಆಡಳಿತದಲ್ಲಿ ಧರ್ಮ ಬೆರೆಸುವ ಯಾರೊಂದಿಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ: ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ

ಆಡಳಿತದಲ್ಲಿ ಧರ್ಮ ಬೆರೆಸುವ ಯಾರೊಂದಿಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ: ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ

ಹೊಸದಿಲ್ಲಿ: ಆಡಳಿತದಲ್ಲಿ ಧರ್ಮ ಬೆರೆಸುವ ಯಾರೊಂದಿಗೂ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಹೇಳಿದ್ದಾರೆ.


ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿಯ ಫೋಟೋಗಳನ್ನು ಮುದ್ರಿಸಬೇಕು ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದದ್ಲಾನಿ ಈ ಹೇಳಿಕೆ ನೀಡಿದ್ದಾರೆ.


ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ನಾವು ಜಾತ್ಯಾತೀತ, ಸಮಾಜವಾದಿ ಗಣರಾಜ್ಯ ಎಂದು ನಮ್ಮ ಭಾರತದ ಸಂವಿಧಾನ ಹೇಳುತ್ತದೆ. ಆದ್ದರಿಂದ, ಆಡಳಿತದಲ್ಲಿ ಧರ್ಮಕ್ಕೆ ಯಾವುದೇ ಸ್ಥಾನವಿರುವಂತಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಸರ್ಕಾರದ ಆಡಳಿತದಲ್ಲಿ ಯಾವುದೇ ಧರ್ಮದ ಯಾವುದೇ ಭಾಗವನ್ನು ತರುವ ಯಾರೊಂದಿಗೂ ನನಗೆ ಯಾವುದೇ ಸಂಬಂಧವಿರುವುದಿಲ್ಲ” ಎಂದು ತಿಳಿಸಿದ್ದಾರೆ.

Join Whatsapp
Exit mobile version