ಗನ್-ಬಂದೂಕು ಹಿಡಿಯುವ ಸಂಸ್ಕೃತಿ ನನ್ನದಲ್ಲ: ಸಚಿವ ಪರಮೇಶ್ವರ್’ಗೆ ಕುಮಾರಸ್ವಾಮಿ ತಿರುಗೇಟು

- Advertisement -

ಬೆಂಗಳೂರು: ಬಂದೂಕು-ಗನ್ ಹಿಡಿಯುವ ಸಂಸ್ಕೃತಿ ನನ್ನದಲ್ಲ, ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವಗಳಲ್ಲಿ ನಂಬಿಕೆ ಇಟ್ಟಿರುವವನು ನಾನು, ಕುವೆಂಪು ಅವರು ಸಾರಿದ ಸರ್ವಜನಾಂಗದ ಶಾಂತಿ ತೋಟ ಸಂದೇಶವನ್ನು ಅನುಸರಿಸಿಕೊಂಡು ನಡೆಯುವ ಜನ ನಾವು ಎಂದು ಕೇಂದ್ರ ಸಚಿವ ಹೆಚ್,ಡಿ.ಕುಮಾರಸ್ವಾಮಿಯವರು ಹೇಳಿದ್ದು, ಈ ಮೂಲಕ ಗೃಹ ಸಚಿವ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.

- Advertisement -

ನಗರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಿಂದ ಇಲ್ಲಿಯವರೆಗೆ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರೆ, ಈಗಿನ ಸಂಸ್ಥೆಗಳಲ್ಲಿ ಯಾವುದೇ ದಾಖಲೆಗಳಿಗೂ ಗೌರವ ಇರಲ್ಲ. ನಾನು ಯುದ್ದ ಸಾರುತ್ತೇನೆ ಅಂತ ಹೇಳಿದ್ದಕ್ಕೆ, ಪರಮೇಶ್ವರ್ ಬಂದೂಕ್ ಹಿಡಿದು ಬರ್ತಾರಾ? ಎಂದು ಕೇಳುತ್ತಾರೆ. ಬಂದೂಕು-ಗನ್ ಹಿಡಿಯುವ ಸಂಸ್ಕೃತಿ ನನ್ನದಲ್ಲ, ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವಗಳಲ್ಲಿ ನಂಬಿಕೆ ಇಟ್ಟಿರುವವನು ನಾನು, ಕುವೆಂಪು ಅವರು ಸಾರಿದ ಸರ್ವಜನಾಂಗದ ಶಾಂತಿ ತೋಟ ಸಂದೇಶವನ್ನು ಅನುಸರಿಸಿಕೊಂಡು ನಡೆಯುವ ಜನ ನಾವು. ಕರ್ನಾಟಕ ರಾಜ್ಯ ಸಿಡಿ, ಪೆನ್ ಡ್ರೈವ್ ತಯಾರಿಸುವ ಫ್ಯಾಕ್ಟರಿ ಎಂದು ಸಚಿವರು ಹೇಳುತ್ತಾರೆ. ಯಾವ ತನಿಖೆ ಮಾಡಿದ್ದೀರಿ? ಹಳ್ಳ ಹಿಡಿಸಿದ್ದೀರಿ ಎಂದು ಕಿಡಿಕಾರಿದರು.

ನೀಚ ಕೆಲಸ ಕೆಲಸ ಮಾಡುವವರು ಯಾರೆಂಬುದು ನಿಮಗೆ ಗೊತ್ತಿದೆ. ಸಿದ್ದರಾಮಯ್ಯ ಯಾರ ಮನೆ ರೈಡ್ ಮಾಡಿಸಿದ್ದರು? ಏನು ಸಿಕ್ಕಿತು? ಗೃಹ ಸಚಿವರ ಅವರು? ಇಂತವರು ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ನನ್ನ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಮಾಜಿ ಸಿಎಂ, ಕೇಂದ್ರ ಮಂತ್ರಿ, ಮಾಜಿ ಪ್ರಧಾನಿಯ ಮಗ ನಾನು. ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಸವಾಲು ಹಾಕಿದರು.

- Advertisement -

ಟ್ರಂಪ್ ಕೈಯಲ್ಲೆ ತನಿಖೆ ಮಾಡಿಸಿ ನಾನು ತಯಾರಿದ್ದೇನೆ. ನನಗೆ ಈ ಪರಿಸ್ಥಿತಿ ತಂದಿದ್ದೀರಿ. ನೀವು ಎಷ್ಟು ಕುಟುಂಬ ಹಾಳು ಮಾಡಿದ್ದೀರಿ. ನಾಡಿನ ಜನತೆ 5 ವರ್ಷದ ಸರ್ಕಾರ ಕೊಟ್ಟರೆ, ಬೆಲೆ ಏರಿಕೆ ಮಾಡಿ ಲೂಟಿ ಮಾಡುತ್ತಿದ್ದಾರೆ. ದಾಖಲೆಗಳನ್ನು ಭದ್ರವಾಗಿ ಇಟ್ಟಿದ್ದೇನೆ. ನಾನು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮ ಹೇಗಿದೆ? ನೀವು ಎಷ್ಟು ಜನರ ಮನೆ ಹಾಳು ಮಾಡಿದ್ದೀರಿ?. ನಿಮ್ಮನ್ನು ಎದುರಿಸುತ್ತೇವೆ ಅಂತ ಹೇಳಿಲ್ಲ. ಮಂಡ್ಯ ಜಿಲ್ಲೆಯ ಜನರು ಮುಂದಿನ ದಿನಗಳಲ್ಲಿ ನಾಡು ಉಳಿಯಬೇಕಾದ್ರೆ ಒಳ್ಳೆಯ ವ್ಯಕ್ತಿಯನ್ನು ತನ್ನಿ. ನಾನು ಈ ಜಾಗದಲ್ಲಿದ್ದರೆ 5 ಸಾವಿರ ರೂಪಾಯಿ ಕೊಡುತ್ತಿದ್ದೆ. ಇವರು ಬರೀ 2 ಸಾವಿರ ರೂಪಾಯಿ ಕೊಡುತ್ತಾರೆ. ಮುಡಾ ಕೇಸ್ ಯಾವ ರೀತಿ ತನಿಖೆ ಮಾಡಿದರೂ ಈ ವ್ಯವಸ್ಥೆಯಲ್ಲಿ ನ್ಯಾಯ ದೊರಕಲ್ಲ ಎಂದು ತಿಳಿಸಿದರು.

- Advertisement -


Must Read

Related Articles