Home ಗಲ್ಫ್ ಜೋ ಬೈಡೆನ್ ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂದು ನಾನು ತಲೆಕೆಡಿಸಿಕೊಂಡಿಲ್ಲ: ಸೌದಿ ರಾಜಕುಮಾರ ಮುಹಮ್ಮದ್

ಜೋ ಬೈಡೆನ್ ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂದು ನಾನು ತಲೆಕೆಡಿಸಿಕೊಂಡಿಲ್ಲ: ಸೌದಿ ರಾಜಕುಮಾರ ಮುಹಮ್ಮದ್

ರಿಯಾದ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ತಮ್ಮ ಬಗ್ಗೆ ಏನು ತಪ್ಪು ತಿಳಿದುಕೊಂಡಿದ್ದಾರೆ ಎಂಬ ಬಗ್ಗೆ ನಾನು ತಲೆಗೆಡಿಸಿಕೊಳ್ಳುವುದಿಲ್ಲ ಎಂದು ಸೌದಿ ಅರೇಬಿಯಾದ ರಾಜಕುಮಾರ್ ಮುಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸಹೂದ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಧಿಕಾರ ವಹಿಸಿಕೊಂಡಾಗಿನಿಂದ, ಸೌದಿ ಮತ್ತು ಅಮೆರಿಕ ನಡುವಿನ ದೀರ್ಘಕಾಲದ ರಾಜತಾಂತ್ರಿಕ ಕಾರ್ಯತಂತ್ರವು ರಿಯಾದ್’ನ ಮಾನವ ಹಕ್ಕುಗಳ ದಾಖಲೆಯ ಮೇಲೆ ಅದರಲ್ಲೂ ವಿಶೇಷವಾಗಿ ಯೆಮೆನ್ ಯುದ್ಧ ಮತ್ತು ಸೌದಿ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಗೆ ಸಂಬಂಧಿಸಿದಂತೆ ತೀವ್ರ ಒತ್ತಡಕ್ಕೆ ಸಿಲುಕಿದೆ ಎಂದು ಹೇಳಲಾಗಿದೆ.

ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆಯ ಬಳಿಕ ಸೌದಿ ಮತ್ತು ಅಮೆರಿಕ ನಡುವಿನ ಹಳಸಿದ ಸಂಬಂಧ ಮತ್ತು ಸೌದಿ ರಾಜಕುಮಾರನ ಬಗೆಗಿನ ಜೋ ಬೈಡೆನ್ ಅವರ ಅಭಿಪ್ರಾಯದ ಕುರಿತು ಟಿವಿ ನಿರೂಪಕನ ಪ್ರಶ್ನೆಗೆ ಸೌದಿ ರಾಜಕುಮಾರ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಖಶೋಗಿ ಅವರ ಹತ್ಯೆಯಲ್ಲಿ ಸೌದಿ ರಾಜಕುಮಾರ ಶಾಮೀಲಾಗಿರುವ ಕುರಿತು ಅಮೆರಿಕ ಗುಪ್ತಚರ ವರದಿಯನ್ನು ಜೋ ಬೈಡೆನ್ ಆಡಳಿತವು ಬಿಡುಗಡೆ ಮಾಡಿದ್ದು, ಈ ವರದಿಯನ್ನು ಸೌದಿ ರಾಜಕುಮಾರ ಮುಹಮ್ಮದ್ ನಿರಾಕರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜಕುಮಾರ ಮುಹಮ್ಮದ್ , ಖಶೋಗಿಯ ಕ್ರೂರ ಹತ್ಯೆಯನ್ನು ಮುಂದಿಟ್ಟಿಕೊಂಡು ನನ್ನ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

Join Whatsapp
Exit mobile version