ಬೆಂಗಳೂರು: ನಮ್ಮ ಹತ್ತಿರ ಬಂದು ತಿಂದು ಉಂಡು ಮಜಾ ಮಾಡಿಕೊಂಡಿರುವವರು ಅವರು, ಸಾಲ ತೀರಿಸಿಕೊಂಡು ಕುತ್ತಿಗೆ ಕುಯ್ಯಿಸಿಕೊಂಡು ಸಾಯುತ್ತಿರುವವರು ನಾವು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಕುಮಾರಸ್ವಾಮಿ ಅವರ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ದೇಶದ ಆಸ್ತಿ, ಜನರು ಬದುಕು ಮತ್ತು ನಮ್ಮ ಸಂಸ್ಕೃತಿ. ಅವರ ಮಗ ನಟನೆ ಮಾಡುತ್ತಾನೆ, ಇವರು ದೇವಾಲಯಗಳು, ಚರ್ಚ್, ಮಸೀದಿ ಮತ್ತು ಕ್ರೀಡೆ ಅಂತ ಸಿನಿಮಾ ತಯಾರು ಮಾಡುತ್ತಾರೆ. ಎಲ್ಲ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು. ನನಗೂ ಬಂದಿತ್ತು. ರಾಜಕಾರಣ ಮಾಡುವವರು ಮಾಡಲಿ. ಅವರಿಗೆ ಒಳ್ಳೆದಾಗ್ಲಿ. ಬರಗಾಲದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ ಎಂದರು.