Home ಟಾಪ್ ಸುದ್ದಿಗಳು ಹೈದರಾಬಾದ್: ಪೊಲೀಸರ ಚಿತ್ರಹಿಂಸೆಗೆ ಮುಸ್ಲಿಮ್ ಯುವಕ ಸಾವು

ಹೈದರಾಬಾದ್: ಪೊಲೀಸರ ಚಿತ್ರಹಿಂಸೆಗೆ ಮುಸ್ಲಿಮ್ ಯುವಕ ಸಾವು

ಹೈದರಾಬಾದ್: ಕಸ್ಟಡಿಯಲ್ಲಿದ್ದ ದಿನಗೂಲಿ ಕಾರ್ಮಿಕನೊಬ್ಬ ಪೊಲೀಸರ ಚಿತ್ರಹಿಂಸೆಗೆ ಬಲಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.


ಮುಹಮ್ಮದ್ ಖದೀರ್ ಮೃತಪಟ್ಟ ದಿನಗೂಲಿ ಕಾರ್ಮಿಕ.
ಮುಹಮ್ಮದ್ ಖದೀರ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದವರು ಮತ್ತು ಸಾಮಾಜಿಕ ಕಾರ್ಯಕರ್ತರು ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಮುಹಮ್ಮದ್ ಖದೀರ್ ಸಾವಿನ ನಂತರ, ಎಸ್. ಐ. ರಾಜಶೇಖರ್ ಅವರನ್ನು ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋಗೆ, ಕಾನ್ ಸ್ಟೆಬಲ್ ಪವನ್ ಕುಮಾರ್ ಅವರನ್ನು ರೆಗೋಡು ಪೊಲೀಸ್ ಠಾಣೆಗೆ ಮತ್ತು ಮತ್ತೊಬ್ಬ ಕಾನ್ ಸ್ಟೆಬಲ್ ಪ್ರಶಾಂತ್ ಅವರನ್ನು ಪಾಪಣ್ಣಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.


ಮೇದಕ್ ಪೊಲೀಸರ ಕ್ರೌರ್ಯದ ವೀಡಿಯೋವನ್ನು ಬಿಡುಗಡೆ ಮಾಡಲಾಗಿದ್ದು, ಜನವರಿ 27 ರಂದು ಹೈದರಾಬಾದ್’ನಲ್ಲಿರುವ ತನ್ನ ಸಹೋದರಿಯ ಮನೆಯಿಂದ ಕರೆದೊಯ್ದು ಕ್ರೂರ ಚಿತ್ರಹಿಂಸೆಗೆ ಒಳಪಡಿಸಲಾಗಿದೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
ಬಳಿಕ ಖದೀರ್ ಅವರನ್ನು ಐದು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಲಾಯಿತು ಮತ್ತು ನಂತರ ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಗೃಹಬಂಧನದಲ್ಲಿರಿಸಲಾಯಿತು ಎಂದು ಆರೋಪಿಸಲಾಗಿದೆ.

Join Whatsapp
Exit mobile version